ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ದರ 25 ಪೈಸೆ ಹೆಚ್ಚಳ

Last Updated 26 ಸೆಪ್ಟೆಂಬರ್ 2021, 11:40 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಭಾನುವಾರ ಡೀಸೆಲ್‌ ದರವನ್ನು ಲೀಟರಿಗೆ 25 ಪೈಸೆ ಹೆಚ್ಚಿಸಿವೆ. ಪೆಟ್ರೋಲ್‌ ದರದಲ್ಲಿ ಬದಲಾವಣೆ ಆಗಿಲ್ಲ.

ಈ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಡೀಸೆಲ್‌ ದರ ₹94.51ಕ್ಕೆ ತಲುಪಿದೆ. ದೆಹಲಿಯಲ್ಲಿ ಡೀಸೆಲ್ ದರ ₹ 89.07ಕ್ಕೆ, ಮುಂಬೈನಲ್ಲಿ ₹ 96.68ಕ್ಕೆ ಏರಿಕೆ ಕಂಡಿದೆ.

ಸೆಪ್ಟೆಂಬರ್‌ 24ರಂದು ಡೀಸೆಲ್‌ ದರವನ್ನು ಲೀಟರಿಗೆ 20 ಪೈಸೆ ಹೆಚ್ಚಿಸಲಾಗಿತ್ತು. ಆಗ ಸಹ ಪೆಟ್ರೋಲ್‌ ದರದಲ್ಲಿ ಬದಲಾವಣೆ ಮಾಡಿರಲಿಲ್ಲ. ಬ್ರೆಂಟ್‌ ಕಚ್ಚಾತೈಲ ದರವು ವಾರದಲ್ಲಿ ಶೇ 2ರಷ್ಟು ಏರಿಕೆ ಕಂಡಿದ್ದು ಬ್ಯಾರಲ್‌ಗೆ 77.50 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT