ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ನಿ–ರಿಲಯನ್ಸ್‌ ವಿಲೀನ ಒಪ್ಪಂದಕ್ಕೆ ಅಂಕಿತ

Published 28 ಫೆಬ್ರುವರಿ 2024, 16:25 IST
Last Updated 28 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯು ₹70 ಸಾವಿರ ಕೋಟಿ ಮೊತ್ತದ ಜಂಟಿ ಉದ್ಯಮಕ್ಕೆ ಬುಧವಾರ ಸಹಿ ಹಾಕಿವೆ. 

ಈ ಒಪ್ಪಂದದಡಿ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ಒಗ್ಗೂಡಲಿವೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲಾಗುತ್ತದೆ.

ಒಪ್ಪಂದದಲ್ಲಿ ರಿಲಯನ್ಸ್‌ ಶೇ 63.16ರಷ್ಟು ಪಾಲು ಹೊಂದಿದ್ದರೆ, ಡಿಸ್ನಿ ಉಳಿದ ಶೇ 36.84ರಷ್ಟು ಪಾಲಿನ ಮೇಲೆ ಒಡೆತನ ಹೊಂದಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಅಲ್ಲದೆ, ಜಂಟಿ ಸಹಭಾಗಿತ್ವದಡಿ ಒಟಿಟಿ ವೇದಿಕೆಗಳ ವ್ಯವಹಾರಕ್ಕೆ ₹11,500 ಕೋಟಿ ಹೂಡಿಕೆ ಮಾಡಲು ರಿಲಯನ್ಸ್‌ ಒಪ್ಪಿಗೆ ನೀಡಿದೆ.  

ಒಪ್ಪಂದ ಮುಗಿದ ಬಳಿಕ ಇದನ್ನು ರಿಲಯನ್ಸ್ ನಿಯಂತ್ರಿಸಲಿದ್ದು, ಜಂಟಿ ಉದ್ಯಮದ ಮುಖ್ಯಸ್ಥರಾಗಿ ನೀತಾ ಅಂಬಾನಿ ಮತ್ತು ಉಪಾಧ್ಯಕ್ಷರಾಗಿ ಬೋಧಿ ಟ್ರೀ ಸಿಸ್ಟಂನ ಸಹ-ಸಂಸ್ಥಾಪಕ  ಉದಯ್ ಶಂಕರ್ ಉದಯ ಶಂಕರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ರಿಲಯನ್ಸ್‌ ಕಂಪನಿ ತಿಳಿಸಿದೆ.

‘ಕಂಪನಿಗೆ ದೀರ್ಘಾವಧಿಯ ಮೌಲ್ಯ ಸೃಷ್ಟಿಸಲು ಈ ಜಂಟಿ ಉದ್ಯಮವು ಉತ್ತಮ ಅವಕಾಶವನ್ನು ಒದಗಿಸಲಿದೆ’ ಎಂದು ವಾಲ್ಟ್ ಡಿಸ್ನಿ ಕಂಪನಿಯ ಸಿಇಒ ಬಾಬ್ ಐಗರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT