ಶನಿವಾರ, ಸೆಪ್ಟೆಂಬರ್ 18, 2021
28 °C

ಡಾಲರ್ ಇಂಡಸ್ಟ್ರೀಸ್ ಆದಾಯ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಾಲರ್ ಇಂಡಸ್ಟ್ರೀಸ್ ಕಂಪನಿಯು ಜೂನ್‌ ತ್ರೈಮಾಸಿಕದ ತನ್ನ ಲೆಕ್ಕಪತ್ರವನ್ನು ಪ್ರಕಟಿಸಿದ್ದು, ಒಟ್ಟು ₹ 205.49 ಕೋಟಿ ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 159.62 ಕೋಟಿ ಆದಾಯ ಗಳಿಸಿತ್ತು ಎಂದು ಪ್ರಕಟಣೆ ತಿಳಿಸಿದೆ.

‘ಕೋವಿಡ್‌ ಸಂಬಂಧಿತ ನಿರ್ಬಂಧಗಳ ಕಾರಣದಿಂದಾಗಿ ಮಾರುಕಟ್ಟೆಯು ಇನ್ನಷ್ಟೇ ಚೇತರಿಕೆ ಕಾಣಬೇಕಿದೆ. ಹೀಗಿದ್ದರೂ ಮೊದಲ ತ್ರೈಮಾಸಿಕದಲ್ಲಿನ ಫಲಿತಾಂಶವು ನಮಗೆ ಪ್ರೋತ್ಸಾಹ ನೀಡುವಂತೆ ಇದೆ. ಈ ಫಲಿತಾಂಶವು ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕುಮಾರ್ ಗುಪ್ತ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.