ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ದೇಶೀಯ ವಿಮಾನ ಸಂಚಾರ ಶೇ 4.8ರಷ್ಟು ಏರಿಕೆ

Published 15 ಮಾರ್ಚ್ 2024, 14:16 IST
Last Updated 15 ಮಾರ್ಚ್ 2024, 14:16 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯ ವಿಮಾನ ಪ್ರಯಾಣಿಕರ ಪ್ರಮಾಣವು ಫೆಬ್ರುವರಿಯಲ್ಲಿ ಶೇ 4.8ರಷ್ಟು ಏರಿಕೆ ಆಗಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.20 ಕೋಟಿ ಜನ ಪ್ರಯಾಣಿಸಿದ್ದರೆ, ಪ್ರಸಕ್ತ ಫೆಬ್ರುವರಿಯಲ್ಲಿ 1.26 ಕೋಟಿ ಜನ ಪ್ರಯಾಣ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಜನವರಿಯಲ್ಲಿ 1.31 ಕೋಟಿ ಜನ ಸಂಚರಿಸಿದ್ದರು. ಇದಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಪ್ರಯಾಣಿಸಿದವರ ಸಂಖ್ಯೆ ಕಡಿಮೆ ಇದೆ.

ಜನವರಿ ಮತ್ತು ಫೆಬ್ರುವರಿಯಲ್ಲಿ 2.57 ಕೋಟಿ ಪ್ರಯಾಣಿಕರು ಸಂಚರಿಸಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.46 ಕೋಟಿ ಜನ ಪ್ರಯಾಣಿಸಿದ್ದರು. ವಾರ್ಷಿಕ ಬೆಳವಣಿಗೆ ದರ ಶೇ 4.74 ಇದ್ದರೆ, ಮಾಸಿಕ ಬೆಳವಣಿಗೆ ದರ ಶೇ 4.80 ಇದೆ ಎಂದು ಡಿಜಿಸಿಎ ತಿಳಿಸಿದೆ.

ಫೆಬ್ರುವರಿಯಲ್ಲಿ 1.55 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿಮಾನ ವಿಳಂಬದಿಂದ ತೊಂದರೆಗೆ ಒಳಗಾಗಿದ್ದು, ವಿಮಾನಯಾನ ಸಂಸ್ಥೆಗಳು ₹2.22 ಕೋಟಿ ಮೊತ್ತವನ್ನು ಪರಿಹಾರವಾಗಿ ಪಾವತಿಸಿವೆ. 29,143 ಪ್ರಯಾಣಿಕರು ವಿಮಾನ ರದ್ದತಿಯಿಂದ ತೊಂದರೆಗೆ ಒಳಗಾಗಿದ್ದು, ₹99.96 ಲಕ್ಷವನ್ನು ವಿಮಾನಯಾನ ಸಂಸ್ಥೆಗಳು ಪರಿಹಾರವಾಗಿ ನೀಡಿವೆ ಎಂದು ಡಿಜಿಸಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT