ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೂ ಮುಂಚಿನ ಮಟ್ಟ ಮೀರಿದ ರಿಟೇಲ್‌ ಮಾರಾಟ: ಆರ್‌ಎಐ

Last Updated 20 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ರಿಟೇಲ್‌ ಮಾರಾಟವು 2021ರ ನವೆಂಬರ್‌ನಲ್ಲಿ, ಹಿಂದಿನ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇಕಡ 16ರಷ್ಟು ಬೆಳವಣಿಗೆ ಕಂಡಿದೆ. 2019ರ ನವೆಂಬರ್‌ನಲ್ಲಿ ಆಗಿದ್ದ ಮಾರಾಟಕ್ಕಿಂತ ಶೇ 9ರಷ್ಟು ಹೆಚ್ಚಾಗಿದೆ ಎಂದು ರಿಟೇಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಆರ್‌ಎಐ) ತಿಳಿಸಿದೆ.

ಓಮೈಕ್ರಾನ್‌ ಸೃಷ್ಟಿಸಿರುವ ಆತಂಕದ ನಡುವೆಯೂ ವಹಿವಾಟು ಚೇತರಿಕೆ ಆಗಿದೆ ಎಂದು ಅದು ತಿಳಿಸಿದೆ. ವಹಿವಾಟು ಸುಧಾರಿಸುತ್ತಿದ್ದು, ಈ ಸ್ಥಿತಿಯು ಇದೇ ರೀತಿ ಮುಂದುವರಿಯುವ ಭರವಸೆ ಇದೆ. ಹೀಗಿದ್ದರೂ ಓಮೈಕ್ರಾನ್‌ ಮತ್ತು ಕೋವಿಡ್‌ನ ಮೂರನೇ ಅಲೆಯ ಆತಂಕ ಇದೆ ಎಂದು ‘ಆರ್‌ಎಐ’ನ ಸಿಇಒ ಕುಮಾರ್‌ ರಾಜಗೋಪಾಲನ್‌ ಹೇಳಿದ್ದಾರೆ.

ಗ್ರಾಹಕ ಬಳಕೆ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗವು 2019ರ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಶೇ 32ರಷ್ಟು ಬೆಳವಣಿಗೆ ಕಂಡಿದೆ. ಕ್ರೀಡಾ ಸಾಮಗ್ರಿಗಳ ವಿಭಾಗ ಶೇ 18ರಷ್ಟು ಮತ್ತು ಉಡುಪು ವಿಭಾಗ ಶೇ 6ರಷ್ಟು ಬೆಳವಣಿಗೆ ಆಗಿದೆ ಎಂದು ‘ಆರ್‌ಎಐ’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT