ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ಬೆಲೆ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಸಾಧ್ಯತೆ: ಎಸ್‌ಇಎ

Last Updated 12 ಡಿಸೆಂಬರ್ 2021, 1:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಡುಗೆ ಎಣ್ಣೆ ದರವು ಮುಂಬರುವ ತಿಂಗಳುಗಳಲ್ಲಿ ಪ್ರತಿ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಹೇಳಿದೆ.

ಎಣ್ಣೆಕಾಳುಗಳ ದೇಶಿ ಉತ್ಪಾದನೆ ಗರಿಷ್ಠ ಮಟ್ಟದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಇಳಿಮುಖವಾಗಿದೆ. ಈ ಕಾರಣಗಳಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರವು ಇನ್ನಷ್ಟು ಇಳಿಕೆ ಆಗುವ ಅಂದಾಜು ಮಾಡಿರುವುದಾಗಿ ತಿಳಿಸಿದೆ.

ಕೇಂದ್ರ ಸರ್ಕಾರವು ಆಮದು ಸುಂಕ ತಗ್ಗಿಸಿರುವುದರಿಂದ ಅಡುಗೆ ಎಣ್ಣೆ ದರವು ಒಂದು ತಿಂಗಳಿನಲ್ಲಿ ಕೆ.ಜಿಗೆ
₹ 8 ರಿಂದ ₹ 10ರವರೆಗೆ ಇಳಿಕೆ ಆಗಿದೆ ಎಂದು ಮಾಹಿತಿ ನೀಡಿದೆ.

ಅಡುಗೆ ಎಣ್ಣೆಗಳ ವಾರ್ಷಿಕ ಬೇಡಿಕೆ 2.2 ಕೋಟಿ ಟನ್‌ಗಳಿಂದ 2.25 ಕೋಟಿ ಟನ್‌ಗಳಷ್ಟಿದೆ. ಇದರಲ್ಲಿ ಶೇ 65ರಷ್ಟನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT