ಜ.24ರಿಂದ ಎಲೆಕ್ಟ್ರೋಟೆಕ್ ಸಮಾವೇಶ

7
12 ರಾಜ್ಯಗಳ ಉದ್ಯಮಿಗಳು ಮೇಳದಲ್ಲಿ ಭಾಗಿ

ಜ.24ರಿಂದ ಎಲೆಕ್ಟ್ರೋಟೆಕ್ ಸಮಾವೇಶ

Published:
Updated:

ಕೊಯಿಮತ್ತೂರು: ಎಲೆಕ್ಟ್ರಿಕಲ್‌ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್‌ನ 5ನೇ ವಾಣಿಜ್ಯ ಮೇಳವು (ಎಲೆಕ್ಟ್ರೊಟೆಕ್‌) ಇದೇ 24ರಿಂದ 4 ದಿನಗಳ ಕಾಲ ಇಲ್ಲಿ ನಡೆಯಲಿದೆ.

ಕರ್ನಾಟಕವೂ ಸೇರಿದಂತೆ 12 ರಾಜ್ಯಗಳ ಉದ್ಯಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಎಲೆಕ್ಟ್ರಿಕಲ್ಸ್‌, ಕೈಗಾರಿಕಾ ಎಲೆಕ್ಟ್ರಾನಿಕ್ಸ್‌ ಮತ್ತು ಮರುಬಳಕೆ ಇಂಧನ ಕುರಿತ ಮೇಳ ಇದಾಗಿದೆ.

‘ಮೇಳದಲ್ಲಿ ಎಲೆಕ್ಟ್ರಿಕಲ್‌ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿನ ತಂತ್ರಜ್ಞಾನ ಮುನ್ನಡೆ, ಈ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಸಂಶೋಧನೆ, ವಿದ್ಯುತ್‌ಚಾಲಿತ ವಾಹನಗಳ ಪ್ರದರ್ಶನ ಇರಲಿದೆ.

ಇದರ ಜತೆಗೆ, ಸಮಾವೇಶದ ಸ್ಥಳದಲ್ಲಿಯೇ ಕೈಗಾರಿಕಾ ನೀರು, ಇಂಧನ ಮತ್ತು ಪರಿಸರಕ್ಕೆ ಸಂಬಂಧಿಸಿದ ಎರಡು ದಿನಗಳ 2ನೆ ಅಂತರರಾಷ್ಟ್ರೀಯ ಸಮ್ಮೇಳನವೂ ನಡೆಯಲಿದೆ. ಇದು ಜ. 25 ರಿಂದ 26ರವರೆಗೆ ನಡೆಯಲಿದೆ. ಆಸಕ್ತರು www.elektrotec.codissia.com ಅಂತರ್ಜಾಲ ತಾಣಕ್ಕೆ  ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !