ನ್ಯೂಯಾರ್ಕ್: ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಈ ವರ್ಷ ಪಾವತಿಸಬೇಕಾದ ತೆರಿಗೆಯ ಮೊತ್ತವನ್ನು ಭಾನುವಾರ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಈ ವರ್ಷ ಅವರು 11 ಶತಕೋಟಿ ಡಾಲರ್ (₹83,572 ಕೋಟಿ) ಗಿಂತಲೂ ಹೆಚ್ಚಿನ ತೆರಿಗೆಯನ್ನು ಪಾವತಿಸುವುದಾಗಿ ತಿಳಿಸಿದ್ದಾರೆ.

ಎಲೋನ್ ಮಸ್ಕ್ ಅವರನ್ನು ಇತ್ತೀಚೆಗೆ 'ಟೈಮ್' ನಿಯತಕಾಲಿಕೆಯು ತನ್ನ ‘ವರ್ಷದ ವ್ಯಕ್ತಿ’ ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ವಾರದ ಹಿಂದೆ ಟ್ವೀಟ್ ಮಾಡಿದ್ದ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಎಲಿಜಬೆತ್ ವಾರೆನ್, ‘ಎಲ್ಲವನ್ನೂ ತಾವೊಬ್ಬರೇ ಇಟ್ಟುಕೊಳ್ಳುವುದನ್ನು ಬಿಟ್ಟು ಎಲೊನ್ ಮಸ್ಕ್ ಅವರು ತೆರಿಗೆ ಪಾವತಿಸಬೇಕು,‘ ಎಂದು ಹೇಳಿದ್ದರು.

ಎಲಿಜಬೆತ್ ವಾರೆನ್ ಅವರಿಗೆ ಟ್ವಿಟರ್‌ನಲ್ಲೇ ತಿರುಗೇಟು ನೀಡಿದ್ದ ಮಸ್ಕ್, ‘ನೀವು 2 ಕ್ಷಣ ನಿಮ್ಮ ಕಣ್ಣುಗಳನ್ನು ತೆರೆದು ನೋಡಿದರೆ, ಅಮೆರಿಕದ ಇತಿಹಾಸದಲ್ಲೆ ಈ ವರ್ಷ ಅತ್ಯಧಿಕ ತೆರಿಗೆಯನ್ನು ಪಾವತಿಸುವವರು ಯಾರು ಎಂಬುದು ನಿಮಗೆ ಗೊತ್ತಾಗಲಿದೆ,’ ಎಂದಿದ್ದರು.

ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎಲೊನ್ ಮಸ್ಕ್ ಅವರ ಟೆಸ್ಲಾ ಕಂಪನಿ 1 ಟ್ರಿಲಿಯನ್ (75 ಲಕ್ಷ ಕೋಟಿ) ಮೌಲ್ಯ ಹೊಂದಿದೆ. ಕಳೆದ ಕೆಲ ವಾರಗಳಲ್ಲಿ ಮಸ್ಕ್ ತಮ್ಮ ಸಂಸ್ಥೆಯ 14 ಬಿಲಿಯನ್ ಡಾಲರ್ (₹1,06,344) ಮೌಲ್ಯದ ಶೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.