ಮಂಗಳವಾರ, ಮಾರ್ಚ್ 28, 2023
33 °C

ಪಿಎಫ್‌ ಖಾತೆಗೆ ಆಧಾರ್: ನಿರ್ದಿಷ್ಟ ಕೈಗಾರಿಕೆಗಳಿಗೆ ಡಿ. 31ರವರೆಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಿ.ಎಫ್‌. ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸುವ ಯೋಜನೆಯನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಬೀಡಿ ಕಾರ್ಖಾನೆ, ಕಟ್ಟಡ ಮತ್ತು ನಿರ್ಮಾಣ, ತೋಟಗಾರಿಕಾ ಉದ್ಯಮಗಳ ಕಾರ್ಮಿಕರಿಗೆ ಡಿಸೆಂಬರ್‌ 31ರವರೆಗೆ ಮುಂದೂಡಿದೆ.

ಈ ನಿರ್ಧಾರದಿಂದಾಗಿ ಕೆಲವು ಉದ್ಯೋಗದಾತರಿಗೆ ತಮ್ಮ ಉದ್ಯೋಗಿಗಳ ಆಧಾರ್‌ ಸಂಖ್ಯೆಯನ್ನು ಪಿ.ಎಫ್‌. ಖಾತೆಗೆ ಜೋಡಿಸಲು ಹೆಚ್ಚಿನ ಕಾಲಾವಕಾಶ ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲಿನ ಉದ್ಯೋಗದಾತರಿಗೆ ಕೂಡ ಆಧಾರ್ ಜೋಡಣೆಗೆ ಡಿಸೆಂಬರ್ 31ರವರೆಗೆ ಅವಧಿ ವಿಸ್ತರಿಸಲಾಗಿದೆ.

ಈ ಹಿಂದೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ಎಲ್ಲಾ ಚಂದಾದಾರರಿಗೂ ಪಿ.ಎಫ್‌ ಖಾತೆಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವುದನ್ನು ಸೆಪ್ಟೆಂಬರ್ 1ರವರೆಗೆ ವಿಸ್ತರಣೆ ಮಾಡಿತ್ತು. ಇದೀಗ ಎರಡನೇ ಬಾರಿಗೆ ಕೆಲವು ಪ್ರದೇಶಗಳು ಮತ್ತು ನಿರ್ದಿಷ್ಟ ಕೈಗಾರಿಕೆಗಳಿಗೆ ಗಡುವು ವಿಸ್ತರಣೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು