ಮಂಗಳವಾರ, ಏಪ್ರಿಲ್ 20, 2021
26 °C

ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ 8.5 ರಷ್ಟು ಬಡ್ಡಿ ದರ ಮುಂದುವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ 8.5 ರಷ್ಟು ಬಡ್ಡಿದರವನ್ನು ಮುಂದುವರಿಸಲು ನಿರ್ಧರಿಸಿದೆ.

ಗುರುವಾರ ಶ್ರೀನಗರದಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಉನ್ನತ ನಿರ್ಧಾರ ಕೈಗೊಳ್ಳುವ ಕೇಂದ್ರೀಯ ಟ್ರಸ್ಟಿಗಳ ಬೋರ್ಡ್ ಸಭೆಯಲ್ಲಿ, 2020-21ರ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿ ಮೇಲೆ ಶೇ. 8.5 ರಷ್ಟು ಬಡ್ಡಿದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಇಪಿಎಫ್‌ಒ ದೇಶದಲ್ಲಿ ಐದು ಕೋಟಿಗಿಂತ ಹೆಚ್ಚು ಸಕ್ರಿಯ ಚಂದಾದಾರರನ್ನು ಹೊಂದಿದೆ.

ಕೊರೊನಾ ವೈರಸ್ ಹಾವಳಿ ನಡುವೆ ಹೆಚ್ಚಿನ ಹಣ ಹಿಂಪಡೆಯುವಿಕೆ ಮತ್ತು ಸದಸ್ಯರ ಕಡಿಮೆ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು 2019-20ರಲ್ಲಿ ನಿಗದಿ ಮಾಡಲಾಗಿದ್ದ ಭವಿಷ್ಯ ನಿಧಿ ಮೇಲಿನ ಶೇಕಡಾ 8.5 ಬಡ್ಡಿ ದರವನ್ನು ಪ್ರಸಕ್ತ ಹಣಕಾಸು ವರ್ಷ (2020-21) ದಲ್ಲಿ ಕಡಿಮೆ ಮಾಡಲಾಗುತ್ತದೆ ಎಂಬ ಉಹಾಪೋಹಗಳು ಎದ್ದಿದ್ದವು.

ಕಳೆದ ಮಾರ್ಚ್‌(2019-20)ನಲ್ಲಿ ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏಳು ವರ್ಷಗಳಲ್ಲೇ ಕನಿಷ್ಠ ಶೇ. 8.5ಕ್ಕೆ ಇಳಿಸಲಾಗಿತ್ತು, ಇದು 2018-19ರಲ್ಲಿ ಶೇ 8.65 ರಷ್ಟಿತ್ತು.

2019-20ರಲ್ಲಿ ನಿಗದಿ ಮಾಡಲಾದ ಇಪಿಎಫ್ (ನೌಕರರ ಭವಿಷ್ಯ ನಿಧಿ) ಮೇಲಿನ ಶೇ. 8.5 ಬಡ್ಡಿ ದರವು 2012-13ರ ನಂತರ ಅತ್ಯಂತ ಕನಿಷ್ಠಮಟ್ಟದ್ದಾಗಿದೆ.

2016-17ರಲ್ಲಿ ಇಪಿಎಫ್‌ಒ ತನ್ನ ಚಂದಾದಾರರಿಗೆ ಶೇ 8.65 ಮತ್ತು 2017-18ರಲ್ಲಿ ಶೇ 8.55 ರಷ್ಟು ಬಡ್ಡಿದರವನ್ನು ನೀಡಿತ್ತು. ಇದು 2015-16ರಲ್ಲಿ ಶೇ .8.8 ರಷ್ಟಿತ್ತು.

2012-13ರಲ್ಲಿ ಶೇ .8.5ರಷ್ಟಿದ್ದ ಭವಿಷ್ಯ ನಿಧಿ ಮೇಲಿನ ಬಡ್ಡಿ ದರ 2013-14 ಮತ್ತು 2014-15ರಲ್ಲಿ ಶೇ. 8.75ಕ್ಕೆ ಹೆಚ್ಚಾಗಿತ್ತು. 2011-12ರಲ್ಲಿ ಇಪಿಎಫ್‌ಒ ಭವಿಷ್ಯ ನಿಧಿಗೆ ಶೇ 8.25 ರಷ್ಟು ಬಡ್ಡಿದರವನ್ನು ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು