ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೌಕರರ ಭವಿಷ್ಯ ನಿಧಿ ಸಂಘಟನೆ: ಹೊಸ ಸದಸ್ಯರ ಸೇರ್ಪಡೆ ಇಳಿಕೆ

Published 30 ಜೂನ್ 2024, 14:20 IST
Last Updated 30 ಜೂನ್ 2024, 14:20 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2023–24ನೇ ಹಣಕಾಸು ವರ್ಷದಲ್ಲಿ ಹೊಸದಾಗಿ 1.09 ಕೋಟಿ ಸದಸ್ಯರು ಸೇರ್ಪಡೆಯಾಗಿದ್ದಾರೆ.

2022–23ರಲ್ಲಿ 1.14 ಕೋಟಿ ಸದಸ್ಯರು ಸೇರ್ಪಡೆಯಾಗಿದ್ದರು. ಇದಕ್ಕೆ ಹೋಲಿಸಿದರೆ ಹೊಸ ಚಂದಾದಾರರ ಸೇರ್ಪಡೆಯಲ್ಲಿ ಶೇ 4ಕ್ಕೂ ಹೆಚ್ಚು ಇಳಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಯೋಜನಾ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.

2019–20ರಲ್ಲಿ 1.10 ಕೋಟಿ, 2020–21ರಲ್ಲಿ 85 ಲಕ್ಷ, 2021–22ರಲ್ಲಿ 1.08 ಕೋಟಿ ಸದಸ್ಯರು ಸೇರ್ಪಡೆಯಾಗಿದದ್ದರು. 2020 ಮತ್ತು 2021ರಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಲಾಕ್‌ಡೌನ್‌ ಘೋಷಿಸಿದ್ದವು. ಇದರಿಂದ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿತು. ಹಾಗಾಗಿ, ಈ ಅವಧಿಯಲ್ಲಿ ಇಪಿಎಫ್‌ಒಗೆ ಹೊಸ ಚಂದಾದಾರರ ಸೇರ್ಪಡೆಯಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

2018–19ರಲ್ಲಿ ಹೊಸದಾಗಿ 1.39 ಕೋಟಿ ಚಂದಾದಾರರು ಸೇರ್ಪಡೆಯಾಗಿದ್ದರು. ಈ ಅಂಕಿಅಂಶಕ್ಕೆ ಹೋಲಿಸಿದರೆ ಕಳೆದ ಐದು ಹಣಕಾಸು ವರ್ಷಗಳಲ್ಲಿ ಹೊಸ ಸದಸ್ಯರ ಸೇರ್ಪಡೆಯು ಕೋವಿಡ್‌ ಪೂರ್ವದಲ್ಲಿದ್ದ ಸ್ಥಿತಿಯಷ್ಟೂ ಚೇತರಿಕೆ ಕಂಡಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT