ಶನಿವಾರ, ಆಗಸ್ಟ್ 13, 2022
26 °C

ಏಕಕಂತಿನಲ್ಲಿ ಪಿಎಫ್‌ ಬಡ್ಡಿ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2019–20ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಮೇಲಿನ ಶೇಕಡ 8.5ರಷ್ಟು ಬಡ್ಡಿಯನ್ನು ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಡಿಸೆಂಬರ್‌ಗೆ ಅಂತ್ಯಕ್ಕೆ ಮೊದಲು ಒಂದೇ ಬಾರಿಗೆ ಪಾವತಿಸುವ ಸಾಧ್ಯತೆ ಇದೆ.

ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ಸೆಪ್ಟೆಂಬರ್‌ನಲ್ಲಿ ಸಭೆ ಸೇರಿದ್ದ ಭವಿಷ್ಯ ನಿಧಿ ಸಂಘಟನೆ ಧರ್ಮದರ್ಶಿಗಳ ಮಂಡಳಿಯು, ಶೇಕಡ 8.5ರಷ್ಟು ಬಡ್ಡಿ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸುವ ತೀರ್ಮಾನ ಕೈಗೊಂಡಿತ್ತು. ಶೇಕಡ 8.15ರಷ್ಟು ಬಡ್ಡಿಯನ್ನು ಒಂದು ಕಂತಿನಲ್ಲಿ, ಶೇಕಡ 0.35ರಷ್ಟು ಬಡ್ಡಿಯನ್ನು ಇನ್ನೊಂದು ಕಂತಿನಲ್ಲಿ ಪಾವತಿಸುವ ತೀರ್ಮಾನ ಆಗಿತ್ತು.

2019–20ನೇ ಸಾಲಿನ ಶೇಕಡ 8.5ರಷ್ಟು ಬಡ್ಡಿ ಪಾವತಿಗೆ ಅನುಮೋದನೆ ನೀಡುವಂತೆ ಕಾರ್ಮಿಕ ಸಚಿವಾಲಯವು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ರವಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ‘ಇದಕ್ಕೆ ಹಣಕಾಸು ಸಚಿವಾಲಯವು ಕೆಲವೇ ದಿನಗಳಲ್ಲಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಹಾಗಾಗಿ, ಈ ತಿಂಗಳ ಅಂತ್ಯದೊಳಗೇ ಬಡ್ಡಿ ಪಾವತಿಸುವ ಸಾಧ್ಯತೆ ಇದೆ’ ಎಂದು ಮೂಲವೊಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು