ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 156 ಕೋಟಿ ಬಂಡವಾಳ ಸಂಗ್ರಹಿಸಿದ ಸಿಂಪಲ್‌ ಎನರ್ಜಿ

Last Updated 24 ನವೆಂಬರ್ 2021, 12:29 IST
ಅಕ್ಷರ ಗಾತ್ರ

ಮುಂಬೈ: ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಸುವ ಬೆಂಗಳೂರಿನ ಸಿಂಪಲ್‌ ಎನರ್ಜಿ ಕಂಪನಿಯು ಆರಂಭಿಕ ಹಂತದಲ್ಲಿ ₹ 156 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಬುಧವಾರ ಹೇಳಿದೆ.

₹ 110 ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಹೂಡಿಕೆದಾರರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಹೆಚ್ಚಿನ ಬಂಡವಾಳ ಸಂಗ್ರಹ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು, ಹೊಸ ಉತ್ಪನ್ನ ಅಭಿವೃದ್ಧಿಪಡಿಸಲು ಮತ್ತು ಎಕ್ಸ್‌ಪೀರಿಯನ್ಸ್‌ ಕೇಂದ್ರಗಳ ವಿಸ್ತರಣೆ ಹಾಗೂ ಕಂಪನಿಯ ವಹಿವಾಟು ವಿಸ್ತರಣೆಯ ಉದ್ದೇಶಗಳಿಗಾಗಿ ಈ ಬಂಡವಾಳವನ್ನು ಬಳಸಿಕೊಳ್ಳಲಾಗುವುದು ಎಂದು ಅದು ಹೇಳಿದೆ.

2019ರಲ್ಲಿ ಸ್ಥಾಪನೆ ಆದ ಸಿಂಪಲ್ ಎನರ್ಜಿ ಕಂಪನಿಯು ಈ ವರ್ಷದ ಆಗಸ್ಟ್‌ 15ರಂದು ಸಿಂಪಲ್‌ ಒನ್‌ ಎನ್ನುವ ವಿದ್ಯುತ್ ಚಾಲಿತ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT