ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ: ಕರ್ನಾಟಕಕ್ಕೆ ಏಕೆ ಮುಖ್ಯ?

Last Updated 19 ಜನವರಿ 2020, 8:57 IST
ಅಕ್ಷರ ಗಾತ್ರ

‘ಸಮಗ್ರ ಮತ್ತು ಸುಸ್ಥಿರ ಜಗತ್ತಿಗಾಗಿ ಹೂಡಿಕೆದಾರರು’ ಎನ್ನುದ ಧ್ಯೇಯವಾಕ್ಯದೊಂದಿಗೆ ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಮಂಗಳವಾರದಿಂದ(ಜ.21) ನಾಲ್ಕು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ನಡೆಯಲಿದೆ.

ಪ್ರತಿ ವರ್ಷ ಜನವರಿಯಲ್ಲಿ ಈ ಸಭೆ ನಡೆಯುವುದು ವಾಡಿಕೆ. ಈ ಬಾರಿಯದ್ದು 50ನೇ ವಾರ್ಷಿಕ ಸಭೆಯಾಗಿದೆ. ವಿಶ್ಯದಾದ್ಯಂತ ಇರುವ ಉದ್ಯಮಿಗಳು, ಪ್ರಮುಖ ರಾಜಕಾರಿಣಿಗಳು, ವಿವಿಧ ಕ್ಷೇತ್ರಗಳಪ್ರಭಾವಿಗಳು ಸೇರಿ ಒಟ್ಟು770 ಮಂದಿ ಈ ಸಭೆಯಲ್ಲಿ ಪಾಲ್ಗೊಂಡು, ತಮ್ಮ ವಿಚಾರ ಮಂಡಿಸುತ್ತಾರೆ. ಶೃಂಗಸಭೆಯಲ್ಲಿ ನಡೆಯುವಒಟ್ಟು ಕಾರ್ಯಕ್ರಮಗಳ ಸಂಖ್ಯೆ 220.

ಆಡಳಿತಾತ್ಮಕ ಕಾರಣಗಳಿಂದ ಕಳೆದ ವರ್ಷ ಸಮಾವೇಶದಿಂದ ದೂರ ಉಳಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಬಾರಿ ಸಭೆಯಲ್ಲಿಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆಸ್ವೀಡನ್‌ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾಥನ್‌ಬರ್ಗ್‌, ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌, ಜರ್ಮನಿಚಾನ್ಸ್‌ಲರ್‌ಏಂಜೆಲಾಮರ್ಕೆಲ್‌, ಅಫ್ಗಾನಿಸ್ತಾನಅಧ್ಯಕ್ಷ ಅಶ್ರಫ್‌ ಘನಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಗಳೆನಿಸಿರುವ ದೇಶಗಳ ಚುಕ್ಕಾಣಿ ಹಿಡಿದ ನಾಯಕರು ಮತ್ತು ಭಾರತದ ನೆರೆಯ ದೇಶಗಳ ಮುಖ್ಯಸ್ಥರು ದಾವೋಸ್‌ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ರಾಜತಾಂತ್ರಿಕವಾಗಿ ಭಾರತಕ್ಕೆ ಮುಖ್ಯ ಎನಿಸುವ ವಿದ್ಯಮಾನ.

ದೊಡ್ಡ ಕಾರ್ಪೊರೇಟ್ ಕಂಪನಿಗಳ ಸಿಇಒಗಳು, ನಾಗರಿಕ ಸಮಾಜದ ಮುಖಂಡರು, ಮಾಧ್ಯಮ ಮುಖ್ಯಸ್ಥರು, ಅಂತರರಾಷ್ಟ್ರೀಯ ಸಂಘಟನೆಗಳಾದ ಐಎಂಎಫ್, ಡಬ್ಲ್ಯೂಟಿಒ, ಒಇಸಿಡಿ, ವಿಶ್ವಬ್ಯಾಂಕ್‌ನ ಮುಖ್ಯಸ್ಥರೂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆರ್ಥಿಕ ಅಸಮಾನತೆಯಿಂದ ಸೃಷ್ಟಿಯಾಗಿರುವ ಸಾಮಾಜಿಕ ಒಡಕು ಹಾಗೂ ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಿರುವ ರಾಜಕೀಯ ಧ್ರುವೀಕರಣದಂಥ ಸವಾಲುಗಳನ್ನು ಎದುರಿಸಲು ಪಾಲುದಾರಿಕೆ ಬಂಡವಾಳವನ್ನು ಪರಿಹಾರ ಮಾರ್ಗವನ್ನಾಗಿ ಹೇಗೆ ಬೆಳೆಸಬಹುದು ಎಂಬ ಬ‌ಗ್ಗೆ ಶೃಂಗ ಸಭೆಯಲ್ಲಿ ಹೆಚ್ಚಿನ ಚರ್ಚೆಗಳು ನಡೆಯಲಿವೆ.

ಮುಂದಿನದಶಕದೊಳಗೆ 1 ಲಕ್ಷ ಕೋಟಿಮರಗಳನ್ನು ನೆಡುವುದು ಮತ್ತು ನಾಲ್ಕನೇ ಕೈಗಾರಿಕ ಯುಗದಲ್ಲಿ 100 ಕೋಟಿಜನರನ್ನು ಅಗತ್ಯ ಕೌಶಲಗಳೊಂದಿಗೆಅಣಿಗೊಳಿಸುವ ಗುರಿಯನ್ನು ಸಭೆ ಘೋಷಿಸುವ ನಿರೀಕ್ಷೆ ಇದೆ.

ಡಬ್ಲ್ಯುಇಎಫ್‌ವರದಿ

ಪ್ರತಿ ವರ್ಷ ಶೃಂಗಸಭೆಗೂ ಮೊದಲು, ಆಯೋಜಕರಾದ ಜಾಗತಿಕ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ವರದಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ವರ್ಷ ಬಿಡುಗಡೆಯಾದ ವರದಿಯುಭಾರತಕ್ಕೆ ಅಷ್ಟೇನೂ ಉತ್ತಮ ಸ್ಥಾನ ಕೊಟ್ಟಿಲ್ಲ.

‘ಲಿಂಗ ಸಮಾನತೆ ಶ್ರೇಯಾಂಕದಲ್ಲಿ ಕಳೆದ ವರ್ಷ 108ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 112ನೇ ಸ್ಥಾನಕ್ಕೆ ಕುಸಿದಿದೆ. ಮಹಿಳೆಯರ ಆರೋಗ್ಯ ಸುಧಾರಣೆ, ಆರ್ಥಿಕ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ವಿಚಾರದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ಆದರೆ ರಾಜಕೀಯ ಸಬಲೀಕರಣ ವಿಚಾರದಲ್ಲಿ 18ನೇ ಸ್ಥಾನ ಗಳಿಸಿದ್ದು, ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. 2006ರಿಂದ ಇಲ್ಲಿಯವರೆಗೆ ಸಾಕಷ್ಟು ಏರಿಳಿತಗಳನ್ನು ದೇಶ ಕಂಡಿದೆ’ ಎಂಬಅಂಶಗಳೂ ವರದಿಯಲ್ಲಿದೆ.

ದಾವೋಸ್‌ನಲ್ಲಿ ಕರ್ನಾಟಕ ಪೆವಿಲಿಯನ್

ಜನವರಿ 20ರಂದು ದಾವೋಸ್ ನಲ್ಲಿ ಕರ್ನಾಟಕ ಪೆವಿಲಿಯನ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾವೇಶದ ಮುಖ್ಯ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡಲಿದ್ದಾರೆ. 38 ಜಾಗತಿಕ ಮಟ್ಟದ ಕಂಪನಿಗಳ ಜತೆಯಲ್ಲಿ ಯಡಿಯೂರಪ್ಪ ಅವರು ಸಂವಾದ ನಡೆಸಲು ಸಭೆನಿಗದಿಯಾಗಿದೆ.

2020ರ ನ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯುವ ಇನ್‌ವೆಸ್ಟ್‌ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಕಂಪನಿಗಳ ಮುಖ್ಯಸ್ಥರಿಗೆ ಯಡಿಯೂರಪ್ಪ ಇದೇ ಸಂದರ್ಭ ಆಹ್ವಾನ ನೀಡಲಿದ್ದಾರೆ.

ಭಾರತದಿಂದ ಯಾರೆಲ್ಲಾ ಪಾಲ್ಗೊಳ್ಳುತ್ತಿದ್ದಾರೆ?

ಭಾರತದಿಂದ ಸುಮಾರು 100 ಮಂದಿ ಸಿಇಒಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಇರಲಿದ್ದಾರೆ. ಭಾರತದ ನಿಯೋಗದ ನೇತೃತ್ವವನ್ನು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ವಹಿಸಲಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಮತ್ತು ಸದ್ಗುರು ಜಗ್ಗಿ ವಾಸುದೇವ್ ಅವರೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾನಸಿಕ ಆರೋಗ್ಯ ಮತ್ತು ಇತರೆ ವಿಷಯಗಳ ಕುರಿತು ದೀಪಿಕಾ ಪಡುಕೋಣೆ ಮಾತನಾಡಲಿದ್ದಾರೆ. ಸಮಾವೇಶದ ಮುಂಜಾನೆ ಅವಧಿಯಲ್ಲಿ ಸದ್ಗುರು ಅವರ ಧ್ಯಾನ ಕಾರ್ಯಕ್ರಮ ನಡೆಯಲಿದೆ.

ಪಾಲ್ಗೊಳ್ಳುವ ಉದ್ಯಮಿಗಳು

ಗೌತಮ್ ಅದಾನಿ, ರಾಹುಲ್‌ ಬಜಾಜ್‌, ಸಂಜೀವ್‌ ಬಜಾಜ್‌, ಕುಮಾರ್‌ ಮಂಗಳಂ ಬಿರ್ಲಾ, ಟಾಟಾ ಸಮೂಹದಿಂದ ಎನ್‌ ಚಂದ್ರಶೇಖರನ್‌, ಉದಯ್‌ ಕೋಟಕ್‌, ಎಸ್‌ಬಿಐ ಅಧ್ಯಕ್ಷರಜನೀಶ್‌ ಕುಮಾರ್‌, ಮುಕೇಶ್ ಅಂಬಾನಿ ಕುಟುಂಬ, ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ, ಸುನೀಲ್ ಮಿತ್ತಲ್, ನಂದನ್ ನಿಲೇಕಣಿ, ಸಲೀಲ್ ಪರೇಖ್, ಅಜೀಂ ಪ್ರೇಮ್‌ಜಿ ಇತರರು ಪಾಲ್ಗೊಳ್ಳಲಿದ್ದಾರೆ.

ಚರ್ಚೆಯಾಗುವ ವಿಷಯಗಳು

ಆರೋಗ್ಯಪೂರ್ಣ ಭವಿಷ್ಯ,ಭೂಮಿಯನ್ನು ರಕ್ಷಿಸುವುದು ಹೇಗೆ,ಉತ್ತಮ ಉದ್ಯಮ,ಜಿಯೊ ಪಾಲಿಟಿಕ್ಸ್‌, ಸಮಾಜ ಮತ್ತು ಭವಿಷ್ಯದ ಕಾಯಕ,ಸುಸ್ಧಿರ ಆರ್ಥಿಕತೆ,ಒಳಿತಿಗಾಗಿತಂತ್ರಜ್ಞಾನ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಯೋಗಿತಾ ಆರ್‌.ಜೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT