ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಫ್‌ಡಿಐ: ಡಬ್ಲ್ಯೂಟಿಒ ನಿಯಮ ಮೀರಿಲ್ಲ’

Last Updated 12 ಫೆಬ್ರುವರಿ 2021, 12:33 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ ನಿಯಮಗಳಲ್ಲಿ ಹಿಂದಿನ ವರ್ಷ ತಂದಿರುವ ಬದಲಾವಣೆಗಳು ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲ್ಯೂಟಿಒ) ನಿಯಮಗಳಿಗೆ ಅನುಗುಣವಾಗಿಯೇ ಇವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಈ ಬದಲಾವಣೆಗಳ ಅನ್ವಯ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವ ಮೊದಲು ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯ.

ಎಫ್‌ಡಿಐ ನಿಯಮಗಳಲ್ಲಿ ತಂದ ಬದಲಾವಣೆಗಳ ಬಗ್ಗೆ ಚೀನಾ ದೇಶವು ಡಬ್ಲ್ಯೂಟಿಒ ಸಭೆಯೊಂದರಲ್ಲಿ ತಕರಾರು ಎತ್ತಿತ್ತು ಎಂಬುದನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಚೀನಾದ ತಕರಾರಿಗೆ ಉತ್ತರವಾಗಿ ಭಾರತವು, ‘ಡಬ್ಲ್ಯೂಟಿಒ ಸಂಘಟನೆಯ ಎಲ್ಲ ಸದಸ್ಯ ದೇಶಗಳ ಎಫ್‌ಡಿಐಗೆ ಭಾರತದಲ್ಲಿ ಅವಕಾಶ ಇದೆ. ತಂದಿರುವ ಬದಲಾವಣೆಗಳು ಡಬ್ಲ್ಯೂಟಿಒಗೆ ಭಾರತ ನೀಡಿರುವ ವಚನಕ್ಕೆ ಅನುಗುಣವಾಗಿಯೇ ಇವೆ’ ಎಂಬ ಉತ್ತರ ನೀಡಿತ್ತು ಎಂದು ಪ್ರಕಾಶ್ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT