ನವದೆಹಲಿ: ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1.42 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಗಿತ್ತು. ಈ ಬಾರಿ ಇದು ₹1.63 ಲಕ್ಷ ಕೋಟಿ ಆಗಿದೆ. ಇದು ಮಾರ್ಚ್ ತ್ರೈಮಾಸಿಕದಲ್ಲಿ ₹82,210 ಕೋಟಿಯಷ್ಟಾಗಿತ್ತು.

ಈಕ್ವಿಟಿ ಒಳಹರಿವು, ಗಳಿಕೆಯ ಮರುಹೂಡಿಕೆ ಮತ್ತು ಇತರೆ ಬಂಡವಾಳ ಹೂಡಿಕೆಯು ಹೆಚ್ಚಳವಾಗಿದ್ದು, ಒಟ್ಟು ಹೂಡಿಕೆ ₹2.21 ಲಕ್ಷ ಕೋಟಿಯಾಗಿದೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ₹1.98 ಲಕ್ಷ ಕೋಟಿಯಾಗಿತ್ತು.

ಕರ್ನಾಟಕ ಮುಂಚೂಣಿ: ರಾಜ್ಯಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಪಟ್ಟಿಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ₹50,094 ಕೋಟಿ ಸ್ವೀಕರಿಸಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (₹47,188 ಕೋಟಿ), ತಮಿಳುನಾಡು (₹23,505 ಕೋಟಿ), ಹರಿಯಾಣ (₹11,444 ಕೋಟಿ), ಗುಜರಾತ್ (₹10,564 ಕೋಟಿ), ದೆಹಲಿ (₹8,803 ಕೋಟಿ) ಮತ್ತು ತೆಲಂಗಾಣ (₹3,477 ಕೋಟಿ) ಇವೆ.

ಇದೇ ಅವಧಿಯಲ್ಲಿ ಅಮೆರಿಕದ ಹೂಡಿಕೆಯ ಪ್ರಮಾಣದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶ ಅಮೆರಿಕ. ಒಟ್ಟು ₹49,379 ಕೋಟಿ ಹೂಡಿಕೆ ಈ ತ್ರೈಮಾಸಿಕದಲ್ಲಿ ಅಮೆರಿಕದಿಂದ ಆಗಿದೆ. ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹13,205 ಕೋಟಿ ಬಂಡವಾಳ ಒಳಹರಿವಾಗಿತ್ತು.

ಜೂನ್ ತ್ರೈಮಾಸಿಕದಲ್ಲಿ ಹೂಡಿಕೆ ಮಾಡಿದ ದೇಶಗಳ ಪೈಕಿ ಸಿಂಗಪುರ, ಮಾರಿಷಸ್, ಸೈಪ್ರಸ್, ಯುಎಇ, ಕೇಮನ್ ಐಸ್ಲ್ಯಾಂಡ್, ನೆದರ್ಲೆಂಡ್ಸ್, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.

2000 ಏಪ್ರಿಲ್ನಿಂದ 2025ರ ವರೆಗೆ ಅಮೆರಿಕ ₹6.71 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಮೂರನೇ ಅತಿಹೆಚ್ಚು ಎಫ್ಡಿಐ ಹೂಡಿಕೆ ಮಾಡಿದ ದೇಶವಾಗಿದೆ. ಮಾರಿಷಸ್ ₹16.04 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಸಿಂಗಪುರ ಎರಡನೇ ಸ್ಥಾನದಲ್ಲಿದ್ದು, ₹15.80 ಲಕ್ಷ ಕೋಟಿಯಾಗಿದೆ.

ಕಂಪ್ಯೂಟರ್ ಯಂತ್ರಾಂಶ ಹಾಗೂ ತಂತ್ರಾಂಶ, ಸೇವೆಗಳು, ವ್ಯಾಪಾರ, ದೂರಸಂಪರ್ಕ, ವಾಹನೋದ್ಯಮ, ರಾಸಾಯನಿಕ ವಲಯಗಳು ಹೆಚ್ಚು ಹೂಡಿಕೆ ಸ್ವೀಕರಿಸಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.