ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಐ ಒಳಹರಿವು ₹ 9,844 ಕೋಟಿ

ದೀರ್ಘಾವಧಿಗೆ ದೇಶದ ಆರ್ಥಿಕ ಮುನ್ನೋಟ ಉತ್ತಮ
Last Updated 3 ಡಿಸೆಂಬರ್ 2022, 18:05 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಡಿಸೆಂಬರ್‌ 2ಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ಷೇರುಗಳ ಖರೀದಿಗೆ ಹೆಚ್ಚು ಗಮನ ಹರಿಸಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ,ನವೆಂಬರ್‌ 28ರಿಂದ ಡಿಸೆಂಬರ್‌ 2ರವರೆಗೆ ನಡೆದ ವಾರದ ವಹಿವಾಟಿನಲ್ಲಿ ಗುರುವಾರ ಹೊರತುಪಡಿಸಿ ಉಳಿದ ನಾಲ್ಕೂ ದಿನಗಳಲ್ಲಿ ಷೇರುಪೇಟೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ನಾಲ್ಕು ದಿನಗಳ ಒಟ್ಟು ಹೂಡಿಕೆ ಮೊತ್ತ ₹ 11,408 ಕೋಟಿ ಆಗಿದ್ದು, ಗುರುವಾರ ₹ 1,564 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ ಒಟ್ಟು ಹೂಡಿಕೆಯು ₹ 9,844 ಕೋಟಿಯಷ್ಟು ಆಗಿದೆ. ನವೆಂಬರ್‌ನಲ್ಲಿ ಎಫ್‌ಐಐ ಒಳಹರಿವು ₹22,546 ಕೋಟಿಯಷ್ಟು ಆಗಿದೆ. ನವೆಂಬರ್ 30ರಂದು ಒಂದೇ ದಿನ ₹9,019 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. 2021ರ ಫೆಬ್ರುವರಿ 24ರ ಬಳಿಕ ದಿನದ ವಹಿವಾಟಿನಲ್ಲಿ ಆಗಿರುವ ಗರಿಷ್ಠ ಹೂಡಿಕೆ ಇದಾಗಿದೆ.

‘ಮಾರುಕಟ್ಟೆಯು ಸದ್ಯ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಯಾವಾಗ ಬೇಕಿದ್ದರೂ ಕುಸಿತ ಅನುಭವಿಸಬಹುದು. ಹೆಚ್ಚಿನ ಲಾಭ ಗಳಿಸಿಕೊಂಡಿರುವ ಹೂಡಿಕೆದಾರರು ಒಂದಿಷ್ಟು ಹಣವನ್ನು ನಿಶ್ಚಿತ ಆದಾಯ ಬರುವ ಕಡೆಗೆ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಬಹುದು. ಹೀಗಾಗಿಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ ಅಲ್ಲ’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

‘ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಎಸ್‌ಐಪಿಯಲ್ಲಿ ಹೂಡಿಕೆ ಮುಂದುವರಿಯಲಿ. ಭಾರತದ ಆರ್ಥಿಕ ಬೆಳವಣಿಗೆಯ ದೀರ್ಘಾವಧಿಯ ಮುನ್ನೋಟ ಉತ್ತಮವಾಗಿರುವ ಕಾರಣ ಆಶಾವಾದ ಹೊಂದಿರಿ. ಇದೇ ವೇಳೆ ಎಚ್ಚರಿಕೆಯೂ ಅಗತ್ಯ’ ಎಂದು ಅವರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT