ಬೆಂಗಳೂರು: ‘ವಿತ್ತೀಯ ಕೊರತೆ ಮತ್ತು ವಿತ್ತೀಯ ಶಿಸ್ತನ್ನು ಕೇಂದ್ರ ಬಜೆಟ್ ಹೊಂದಿದೆ’ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ (ಬೆಂಗಳೂರು ಕ್ಯಾಂಪಸ್) ಪ್ರೊ ವೈಸ್ ಚಾನ್ಸಲರ್ ಮಧುವೀರರಾಘವನ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4 ಎಂದು ಅಂದಾಜಿಸಲಾಗಿದೆ. 2026–27ರ ಆರ್ಥಿಕ ವರ್ಷದಲ್ಲಿ ಇದನ್ನು ಶೇ 4.3ಕ್ಕೆ ಇಳಿಕೆಸುವ ಗುರಿ ಹೊಂದಲಾಗಿದೆ. ಈ ಪಥವು ಹಣಕಾಸಿನ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಈ ಬಜೆಟ್ ಮೂಲಸೌಕರ್ಯ, ಸಂಶೋಧನೆಯ ದೀರ್ಘಕಾಲೀನ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಕೌಶಲ ಉಪಕ್ರಮಗಳು, ಮೂಲಸೌಕರ್ಯದಲ್ಲಿನ ಹೂಡಿಕೆಗಳು, ಐಐಟಿ ಪ್ರಯೋಗಾಲಯಗಳು, ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ನ್ಯೂ ನ್ಯಾಷನಲ್ ಡಿಸೈನ್ ಇನ್ಸ್ಟಿಟ್ಯೂಟ್) ಮತ್ತು ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಸತಿ ನಿಲಯಗಳು ಬಜೆಟ್ನ ಪ್ರಮುಖ ಘೋಷಣೆಗಳಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.