ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ದಿಮೆಗೆ ಫ್ಲಿಪ್‌ಕಾರ್ಟ್‌ ನೆರವು

Last Updated 26 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಭಾರತ ಡಿಜಿಟಲೀಕರಣಕ್ಕೆ ತೆರೆದುಕೊಳ್ಳುತ್ತಿರುವಂತೆಯೇಸಣ್ಣ ವರ್ತಕರಿಗೆ ಇ–ಕಾಮರ್ಸ್‌ ಉದ್ಯಮ ಪ್ರವೇಶಿಸುವ ಹಾದಿ ಸುಗಮವಾಗುತ್ತಿದೆ. ಡಿಜಿಟಲ್‌ ಸಾಧನಗಳ ಹೆಚ್ಚು ಹೆಚ್ಚು ಬಳಕೆಯಿಂದಆನ್‌ಲೈನ್‌ ಷಾಪಿಂಗ್‌ ಹೆಚ್ಚಾಗುತ್ತಿದೆ. ಇದರಿಂದ ಉದ್ಯಮದ ವ್ಯಾಪ್ತಿ ಹಿಗ್ಗುತ್ತಿದ್ದು, ಹೊಸ ವರ್ತಕರ ಪ್ರವೇಶಕ್ಕೆ ಅವಕಾಶಗಳು ಸೃಷ್ಟಿಯಾಗುತ್ತಿವೆ.

ದಕ್ಷಿಣ ಭಾರತದಲ್ಲಿ ಇ–ಕಾಮರ್ಸ್‌ ಅಳವಡಿಕೆ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಗ್ರಾಹಕರಲ್ಲದೆ, ಸಾವಿರಾರು ಉದ್ಯಮಿಗಳು ಮತ್ತು ಸಣ್ಣ ವಹಿವಾಟುದಾರರೂ ತಮ್ಮ ವಹಿವಾಟಿನ ವಿಸ್ತರಣೆಗ ಉದ್ದೇಶಕ್ಕೆ ಆನ್‌ಲೈನ್‌ ವಹಿವಾಟಿನತ್ತ ಮುಖಮಾಡುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ನ ಶೇ 90ರಷ್ಟು ಮಾರಾಟಗಾರರು ಕರ್ನಾಟಕದವರಾಗಿದ್ದಾರೆ. ಈ ಪ್ರದೇಶದ ಮಾರಾಟಗಾರರು ವರ್ಷದಿಂದ ವರ್ಷಕ್ಕೆ ಶೇ 45 ರಿಂದ ಶೇ 50ರಷ್ಟು ಮಾರಾಟ ಪ್ರಗತಿ ಸಾಧಿಸುತ್ತಿದ್ದಾರೆ.

ಸಣ್ಣ ಉದ್ಯಮಗಳು ಆನ್‌ಲೈನ್ ವಹಿವಾಟು ನಡೆಸಲು ಮತ್ತು ಪ್ರಗತಿ ಸಾಧಿಸಲು ಅನುಕೂಲ ಆಗುವಂತೆ ಫ್ಲಿಪ್‌ಕಾರ್ಟ್‌ ಹಲವು ಉತ್ತೇಜನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಫ್ಲಿಪ್‌ಕಾರ್ಟ್ ಸೆಲ್ಲರ್ಸ್‌ ಅಪೆಕ್ಸ್‌ ಪ್ರೋಗ್ರಾಂ ಅದರಲ್ಲಿ ಮುಖ್ಯವಾಗಿದೆ.ಹೊಸ ಮಾರಾಟಗಾರರು ಕೇಂದ್ರೀಕರಿಸಿರುವ ಗ್ರಾಹಕರು ಯಾರು. ವಹಿವಾಟು ನಡೆಸಲು ಅವರು ಮಾಡುತ್ತಿರುವ ವೆಚ್ಚ ಎಷ್ಟು– ಹೀಗೆ ಇನ್ನೂ ಹಲವು ಸಂಗತಿಗಳನ್ನು ಗಮನಿಸಿ ಆ ನಿಟ್ಟಿನಲ್ಲಿಯೇ ಗ್ರಾಹಕರನ್ನು ತಲುಪಲು ನೆರವು ನೀಡಲಾಗುತ್ತದೆ. ಗ್ರಾಹಕರು ಏನನ್ನು ಬಯಸುತ್ತಿದ್ದಾರೆ, ಅವರ ಬೇಡಿಕೆಗಳನ್ನು ಪೂರೈಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿಯನ್ನೂ ನೀಡಲಾಗುತ್ತದೆ.

ಕ್ರೆಡೋ ಬ್ರ್ಯಾಂಡ್‌ನ ಉಪ ವ್ಯವಸ್ಥಾಪಕ ಪದಮ್‌ ಅವರು 2015ರಲ್ಲಿಪುರುಷರ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಆರಂಭಿಸಿದರು. ವಹಿವಾಟು ವಿಸ್ತರಣೆ ಮತ್ತು ವೆಚ್ಚ ನಿರ್ವಹಣೆ, ಫ್ಲಿಪ್‌ಕಾರ್ಟ್‌ ಸೆಲ್ಲರ್ಸ್‌ ಅಪೆಕ್ಸ್‌ ಪ್ರೋಗ್ರಾಂ ಮೂಲಕ ಉತ್ತಮ ನಿರ್ವಹಣೆ ಮತ್ತು ಗುಣಮಟ್ಟ ಪರಿಶೀಲನೆ ಕಲಿತುಕೊಂಡರು. ಒಂದು ವರ್ಷದಲ್ಲಿ ವಹಿವಾಟು ಶೇ 100ರಷ್ಟು ಬೆಳವಣಿಗೆ ಕಂಡಿದೆ. ಉತ್ಪನ್ನ ಮರಳಿ ನೀಡುವವರ ಪ್ರಮಾಣ ಇಳಿಕೆಯಾಗಿದೆ. ವಹಿವಾಟು ಮತ್ತು ಉಳಿತಾಯಕ್ಕೆ ಅನುಕೂಲವಾಗಿದೆ.

ಕ್ಯಾಂಪಸ್‌ಸೂತ್ರ ಲೈಫ್‌ಸ್ಟೈಲ್‌ ಬ್ರ್ಯಾಂಡ್‌ ಸಹ ಪ್ರಯೋಜನ ಪಡೆದುಕೊಂಡಿದೆ. ನಾಲ್ವರು ಸ್ನೇಹಿತರು ಸೇರಿ 2013ರಲ್ಲಿ ಉದ್ಯಮ ಆರಂಭಿಸಿದರು. ಆರಂಭದಲ್ಲಿ 100 ಆರ್ಡರ್‌ಗಳನ್ನು ಪಡೆಯುತ್ತಿದ್ದ ಕಂಪನಿ ಇದೀಗ 4 ಸಾವಿರ ಆರ್ಡರ್‌ಗಳನ್ನು ಪಡೆಯುತ್ತಿದೆ. ಫ್ಲಿಪ್‌ಕಾರ್ಟ್‌ನೊಂದಿಗಿನ ಸಹಯೋಗದಿಂದಮುಂದಿನ ಎರಡು ವರ್ಷಗಳಲ್ಲಿ ₹ 100 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದ್ದಾರೆ. ನಾಲ್ಕರಿಂದ ಐದು ವರ್ಷಗಳಲ್ಲಿ ₹ 1 ಸಾವಿರ ಕೋಟಿ ವಹಿವಾಟು ನಡೆಸುವ ನಿರೀಕ್ಷೆ ಇಟ್ಟುಕೊಂಡಿದೆ.

ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುವ ಅಮೇಜ್‌ಸ್ಟೋರ್‌ ಕಂಪನಿಯು ಕೂಡ ಫ್ಲಿಪ್‌ಕಾರ್ಟ್‌ ಮೂಲಕ ಯಶಸ್ವಿ ಉದ್ದಿಮೆಯಾಗಿ ಬೆಳೆದಿದೆ. ಸತತ ಮೂರು ವರ್ಷಗಳಲ್ಲಿಯೂ ವಿಜೇತಶಾಲಿಯಾಗಿದೆ. 2013ರಲ್ಲಿ ಉದ್ದಿಮೆ ಆರಂಭವಾದಾಗ ದಿನಕ್ಕೆ 50 ಉತ್ಪನ್ನಗಳಿಗೆ ಆರ್ಡರ್‌ ಬರುತ್ತಿತ್ತು. ಇಂದು ಅತಿ ಹೆಚ್ಚಿನ ಮೌಲ್ಯ ಹೊಂದಿರುವ ಮಳಿಗೆಯಾಗಿದೆ. 2018ರ ಬಿಗ್‌ ಬಿಲಿಯನ್‌ ಡೇ ಅವಧಿಯಲ್ಲಿ ಅಮೇಜ್‌ಸ್ಟೋರ್‌ನ ಮಾರಾಟ ದುಪ್ಪಟ್ಟಾಗಿದೆ. ಒಂದು ವರ್ಷದಲ್ಲಿ ಶೇ 30ರಷ್ಟು ಪ್ರಗತಿ ಕಂಡಿದೆ.

ಬ್ಯಾಗ್, ಬ್ಯಾಗ್‌ಪ್ಯಾಕ್ಸ್‌, ಬೆಲ್ಟ್‌, ವಾಲೆಟ್‌ ಹೀಗೆ ಪುರುಷರು ಬಳಸುವ ಉತ್ಪನ್ನಗಳನ್ನು ಮಾರಾಟ ಮಾಡುವ ಪಾಜೊ ಇಂಡಿಯಾದ ಮಾಲಿಕ ಮೈಸೂರಿನ ಮ್ಯಾಥೀವ್‌ ಜಾರ್ಜ್‌ ಅವರು ಮೂರು ವರ್ಷಗಳ ಹಿಂದೆ ಫ್ಲಿಪ್‌ಕಾರ್ಟ್‌ನಲ್ಲಿ ವಹಿವಾಟು ಆರಂಭಿಸಿದರು. ಆರಂಭದಲ್ಲಿ ದಿನಕ್ಕೆ 2 ಆರ್ಡರ್‌ಗಳು ಬರುತ್ತಿದ್ದವು ಈಗ 800 ಆರ್ಡರ್‌ಗಳು ಬರುತ್ತಿವೆ.

‘ಫ್ಲಿಪ್‌ಕಾರ್ಟ್‌ ನನ್ನ ವಹಿವಾಟು ಜೀವನದಲ್ಲಿ ಹೊಸ ತಿರುವನ್ನೇ ನೀಡಿದೆ’ ಎಂದು ಅವರು ಮ್ಯಾಥೀವ್‌ ಹೇಳಿದ್ದಾರೆ.

ಪೂರಕ ಅಂಶಗಳು

* ಇ–ಕಾಮರ್ಸ್‌ ಮೂಲಕ ವಹಿವಾಟು ನಡೆಸುತ್ತಿರುವ ಎಂಎಸ್‌ಎಂಇಗಳ ಮಾರುಕಟ್ಟೆ ಮತ್ತು ವಿತರಣಾ ವೆಚ್ಚದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ

* ಗ್ರಾಮೀಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟಗಾರರಿಗೆ ಇ–ಕಾಮರ್ಸ್‌ ವಹಿವಾಟು ಲಭ್ಯವಾಗಲಿದೆ

* ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಸಣ್ಣ ನಗರ ಮತ್ತು ಪಟ್ಟಣಗಳ ಮಾರಾಟ ಸಮುದಾಯಕ್ಕೆ ಅನುಕೂಲವಾಗಿದೆ

* ಅಂತರ್ಜಾಲ ವೇಗದಲ್ಲಿ ಆಗುತ್ತಿರುವ ಏರಿಕೆಯಿಂದ ಮಾರಾಟಗಾರ ಮತ್ತು ಖರೀದಿದಾರನ ಮಧ್ಯೆ ಉತ್ತಮ ಸಂಪರ್ಕ ಏರ್ಪಡುವುದು ಸುಲಭವಾಗುತ್ತಿದೆ

* ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಡಿಜಿಟಲ್‌ ಸಾಕ್ಷರತೆಗೆ ‌ಹೆಚ್ಚಿನ ಗಮನ ನೀಡುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ವರ್ತಕರಿಗೂ ತಮ್ಮ ವಹಿವಾಟು ವಿಸ್ತರಿಸಿಕೊಳ್ಳಲು ನೆರವಾಗುತ್ತಿದೆ

ಫ್ಲಿಪ್‌ಕಾರ್ಟ್ ಸೆಲ್ಲರ್‌ ಅಪೆಕ್ಸ್‌ ಪ್ರೋಗ್ರಾಂ

2017ರ ಜನವರಿಯಲ್ಲಿ ಆರಂಭಿಸಲಾಯಿತು. ದಾಸ್ತಾನು ಮಳಿಗೆಗಳ ಸುಧಾರಣೆ ಮತ್ತು ಉತ್ಪನ್ನ ಗ್ರಾಹಕರ ಕೈಸೇರುವ ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಇದರ ಉದ್ದೇಶ. ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡುವುದು ಹೇಗೆ ಎನ್ನುವುದನ್ನುಫ್ಲಿಪ್‌ಕಾರ್ಟ್‌ನ ಪರಿಣತರು ತಿಳಿಸಿಕೊಡುತ್ತಾರೆ. 600ಕ್ಕೂ ಅಧಿಕ ಮಾರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಅವರ ವಹಿವಾಟಿನಲ್ಲಿ ಒಂದು ವರ್ಷಕ್ಕೆ ಸರಾಸರಿ ₹ 5 ಲಕ್ಷ ಉಳಿತಾಯವಾಗಿದೆ.

ಪ್ರಯೋಜನಗಳು

* ಉತ್ತಮ ಸಂಸ್ಕರಣಾ ಗುಣಮಟ್ಟ ನಿಯಂತ್ರಣ

* ಮಾನವಸಂಪನ್ಮೂಲ ಸದ್ಬಳಕೆ

* ಉತ್ಪನ್ನಗಳ ನಿರ್ವಹಣೆಯಲ್ಲಿ ಸುಧಾರಣೆ

* ದಾಸ್ತಾನು ಮಳಿಗೆಗಳ ವಿನಿಯೋಗ

* ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ಕಾರ್ಯಾಚರಣೆ ವೆಚ್ಚ ನಿಯಂತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT