ಸೋಮವಾರ, ಆಗಸ್ಟ್ 2, 2021
27 °C

₹26,805 ಕೋಟಿ ಬಂಡವಾಳ ಸಂಗ್ರಹಿಸಿದ ಫ್ಲಿಪ್‌ಕಾರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಐಸಿ, ಕೆನಡಾ ಪೆನ್ಶನ್‌ ಪ್ಲಾನ್‌ ಇನ್‌ವೆಸ್ಟ್‌ಮೆಂಟ್‌ ಬೋರ್ಡ್‌, ಸಾಫ್ಟ್‌ಬ್ಯಾಂಕ್‌ ವಿಷನ್ ಫಂಡ್‌ 2 ಮತ್ತು ವಾಲ್‌ಮಾರ್ಟ್‌ ಕಂಪನಿಗಳಿಂದ ₹ 26,805 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಫ್ಲಿಪ್‌ಕಾರ್ಟ್‌ ಸಮೂಹವು ಸೋಮವಾರ ತಿಳಿಸಿದೆ.

ಈ ಬಂಡವಾಳ ಸಂಗ್ರಹದಿಂದಾಗಿ ಸಮೂಹದ ಮಾರುಕಟ್ಟೆ ಮೌಲ್ಯವು ₹ 2.80 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಫ್ಲಿಪ್‌ಕಾರ್ಟ್‌ ಪ್ರಕಟಣೆ ತಿಳಿಸಿದೆ.

‘ಪ್ರಮುಖ ಜಾಗತಿಕ ಹೂಡಿಕೆದಾರರ ಈ ಹೂಡಿಕೆಯು ಭಾರತದಲ್ಲಿ ಡಿಜಿಟಲ್ ವಾಣಿಜ್ಯ ವಹಿವಾಟಿನ ಬಗ್ಗೆ ಇರುವ ಭರವಸೆ ಮತ್ತು ಎಲ್ಲ ಷೇರುದಾರರಿಗೆ ಫ್ಲಿಪ್‌ಕಾರ್ಟ್‌ನ ಸಾಮರ್ಥ್ಯಗಳ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನಾವು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವ ಜೊತೆಗೆ, ಕಿರಾಣಿ ಅಂಗಡಿಗಳನ್ನೂ ಒಳಗೊಂಡು ದೇಶದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬೆಳವಣಿಗೆ ಹೆಚ್ಚಿಸಲು ಗಮನ ಹರಿಸುತ್ತೇವೆ’ ಎಂದು ಫ್ಲಿಪ್‌ಕಾರ್ಟ್‌ ಸಮೂಹದ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು