ಶನಿವಾರ, ಅಕ್ಟೋಬರ್ 23, 2021
22 °C

ಫ್ಲೋಬಿಜ್‌ನಿಂದ ₹ 228 ಕೋಟಿ ಬಂಡವಾಳ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ತಂತ್ರಜ್ಞಾನ ಕಂಪನಿಯಾಗಿರುವ ‘ಫ್ಲೊಬಿಜ್‌’, ಸಿಕೋಯಾ ಕ್ಯಾಪಿಟಲ್, ಥಿಂಕ್ ಇನ್ವೆಸ್ಟ್‌ಮೆಂಟ್ಸ್‌ ಮತ್ತು ಇತರ ಕೆಲವು ಹೂಡಿಕೆದಾರರಿಂದ ಒಟ್ಟು ₹ 228 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ತಿಳಿಸಿದೆ.

ತನ್ನ ಮಾನವ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದು, ಉತ್ಪನ್ನಗಳ ಅಭಿವೃದ್ಧಿಗಾಗಿ ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಹಣಕಾಸು ಸೇವೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ.

ಪೇಟಿಎಂ ಕಂಪನಿಯ ವಿಜಯ್ ಶೇಖರ್ ಶರ್ಮ, ಕ್ರೆಡ್‌ನ ಕುನಾಲ್ ಶಾ ಸೇರಿದಂತೆ ಹಲವು ಹೂಡಿಕೆದಾರರು ಫ್ಲೋಬಿಜ್‌ ಕಂಪನಿ ನಡೆಸಿದ ಬಂಡವಾಳ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಮಾಲೀಕರ ಬಳಕೆಗಾಗಿ ಫ್ಲೋಬಿಜ್ ಕಂಪನಿಯು ‘ಮೈಬಿಲ್‌ಬುಕ್‌’ ಹೆಸರಿನ ಉತ್ಪನ್ನವನ್ನು 2020ರಲ್ಲಿ ಬಿಡುಗಡೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು