ಶುಕ್ರವಾರ, ಡಿಸೆಂಬರ್ 4, 2020
24 °C

ಖಾತೆಗೆ ಆಧಾರ್‌ ಜೋಡಣೆ: ಬ್ಯಾಂಕ್‌ಗಳಿಗೆ ನಿರ್ಮಲಾ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಆಧಾರ್‌– ಸಾಂದರ್ಭಿಕ ಚಿತ್ರ

ಮುಂಬೈ: ಎಲ್ಲಾ ಬ್ಯಾಂಕ್‌ ಖಾತೆಗಳೂ 2021ರ ಮಾರ್ಚ್‌ 31ರ ಒಳಗಾಗಿ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆಯಾಗಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ.

ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ (ಐಬಿಎ) 73ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿತ್ತೀಯ ಸೇರ್ಪಡೆಯ ಕೆಲಸವು ಇನ್ನೂ ಮುಗಿದಿಲ್ಲ. ಈಗಲೂ ಹಲವು ಬ್ಯಾಂಕ್‌ ಖಾತೆಗಳು ಆಧಾರ್‌ನೊಂದಿಗೆ ಜೋಡಣೆ ಆಗಿಲ್ಲ. ಅಗತ್ಯ ಇರುವ ಮತ್ತು ಅನ್ವಯ ಆಗುವ ಕಡೆಗಳಲ್ಲಿ ಪ್ರತಿ ಖಾತೆಯನ್ನೂ ಪ್ಯಾನ್‌ಗೆ ಜೋಡಿಸಿರಬೇಕು. ಅದೇ ರೀತಿ ಬ್ಯಾಂಕ್‌ನಲ್ಲಿರುವ ಪ್ರತಿಯೊಂದು ಖಾತೆಯನ್ನೂ ಡಿಸೆಂಬರ್‌ ಒಳಗಾಗಿ ಆಧಾರ್‌ಗೆ ಜೋಡಿಸಿ. ಸಾಧ್ಯವಾಗದೇ ಇದ್ದರೆ 2021ರ ಮಾರ್ಚ್‌ 31ರ ಒಳಗಾಗಿ ಪೂರ್ಣಗೊಳಿಸಿರಬೇಕು’ ಎಂದು ತಿಳಿಸಿದ್ದಾರೆ.

ಡಿಜಿಟಲ್‌ ರೂಪದಲ್ಲಿ ನಡೆಯದೇ ಇರುವ ವಹಿವಾಟಿಗೆ ಉತ್ತೇಜನ ನೀಡಬಾರದು ಎಂದು ಬ್ಯಾಂಕ್‌ಗಳಿಗೆ ಹೇಳಿರುವ ಅವರು, ರುಪೇ ಕಾರ್ಡ್‌ ಬಳಕೆಗೆ ಮಾತ್ರವೇ ಪ್ರೋತ್ಸಾಹಿಸುವಂತೆ ಹಾಗೂ ರಾಷ್ಟ್ರೀಯ ಪಾವತಿ ನಿಗಮವನ್ನು (ಎನ್‌ಪಿಸಿಐ) ದೇಶದ ಬ್ರ್ಯಾಂಡ್‌ ಆಗಿ ರೂಪಿಸುವಂತೆಯೂ ಅವರು ಬ್ಯಾಂಕ್‌ಗಳಿಗೆ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು