ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ ಹೊರಹರಿವು ₹ 3,741 ಕೋಟಿ

Last Updated 5 ಜುಲೈ 2020, 13:50 IST
ಅಕ್ಷರ ಗಾತ್ರ

ನವದೆಹಲಿ: ವಿದೇಶ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜುಲೈ 1ರಿಂದ 3ರವರೆಗೆ ಬಂಡವಾಳ ಮಾರುಕಟ್ಟೆಯಿಂದ ₹ 3,741 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಹೂಡಿಕೆದಾರರು ₹ 3,959 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ₹ 218 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಇದರಿಂದ ಒಟ್ಟಾರೆ ಹೊರಹರಿವು ₹ 3,741 ಕೋಟಿ ಆಗಿದೆ.

ಲಾಭ ಗಳಿಕೆಯ ವಹಿವಾಟು ಮತ್ತು ಕಳೆದ ಕೆಲವು ವಾರಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ ಆಗುತ್ತಿರುವುದರಿಂದ ಮಾರಾಟಕ್ಕೆ ಗಮನ ನೀಡಿದ್ದಾರೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜೂನ್‌ನಲ್ಲಿ ₹ 24,053 ಕೋಟಿ ಹೂಡಿಕೆ ಮಾಡಿದ್ದರು.

‘ಹೂಡಿಕೆದಾರರು ಕೆಲವು ಷೇರುಗಳ ಮೇಲಿನ ಹೂಡಿಕೆಯನ್ನು ನಿರಂತರವಾಗಿ ಕಡಿಮೆ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಅತ್ಯಂತ ಆಕರ್ಷಕ ಮೌಲ್ಯ ಹೊಂದಿರುವ ಷೇರುಗಳತ್ತ ಗಮನ ಹರಿಸಿದ್ದಾರೆ’ ಎಂದು ಗ್ರೋವ್‌ ಕಂಪನಿಯ ಸಹ ಸ್ಥಾಪಕ ಹರ್ಷ್‌ ಜೈನ್‌ ಹೇಳಿದ್ದಾರೆ.

ಸಂವಹನ ವಲಯದ ಮೇಲಿನ ಹೂಡಿಕೆ ಕಡಿಮೆ ಮಾಡುತ್ತಿದ್ದು, ಹಣಕಾಸು ವಲಯದ ಷೇರುಗಳ ಖರೀದಿಗೆ ಗಮನ ನೀಡುತ್ತಿದ್ದಾರೆ. ಸಾಲಪತ್ರಗಳ ಮೇಲಿನ ಹೂಡಿಕೆಯು ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಕಂಡುಬರುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT