ಶುಕ್ರವಾರ, ಜೂನ್ 18, 2021
24 °C

ವಿದೇಶಿ ವಿನಿಮಯ ಸಂಗ್ರಹ ಸಾರ್ವಕಾಲಿಕ ದಾಖಲೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಜೂನ್‌ 5ರ ಅಂತ್ಯಕ್ಕೆ ₹61,650 ಕೋಟಿ ಹೆಚ್ಚಾಗಿ ಇದೇ ಮೊದಲ ಬಾರಿಗೆ ₹37.62 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಮಾರ್ಚ್‌ 29ರ ಅಂತ್ಯಕ್ಕೆ ಮೀಸಲು ಸಂಗ್ರಹ ₹36.97 ಲಕ್ಷ ಕೋಟಿಗಳಿಗೆ ತಲುಪಿತ್ತು.

ವಿದೇಶಿ ಕರೆನ್ಸಿಗಳ ಸಂಗ್ರಹವು ₹34.80 ಲಕ್ಷ ಕೋಟಿಗೆ ತಲುಪಿದೆ. ಇದರಿಂದಾಗಿ ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ಭಾರಿ ಏರಿಕೆ ಕಂಡಿದೆ ಎಂದು ಆರ್‌ಬಿಐ ತಿಳಿಸಿದೆ.

ಚಿನ್ನದ ಮೀಸಲು ಸಂಗ್ರಹ ₹2,467 ಕೋಟಿ ಇಳಿಕೆ ಕಂಡು ₹2.42 ಲಕ್ಷ ಕೋಟಿಗೆ ತಲುಪಿದೆ.

ವಾಣಿಜ್ಯ ವಹಿವಾಟು ಇಳಿಮುಖವಾಗಿರುವುದರಿಂದ ಚಾಲ್ತಿ ಖಾತೆ ಕೊರತೆ ಅಂತರ ಕುಗ್ಗಿದೆ. ಇದರಿಂದಾಗಿ ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬಂಡವಾಳ ಒಳಹರಿವು ಸಹ ಹೆಚ್ಚಾಗುತ್ತಿದ್ದು, ಕಂಪನಿಗಳು ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ಪಡೆಯುತ್ತಿವೆ. 2019–20ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಶೇ 13ರಷ್ಟು ಏರಿಕೆಯಾಗಿ ₹3.75 ಲಕ್ಷ ಕೋಟಿಗೆ ತಲುಪಿದೆ. 2018–19ರಲ್ಲಿ ₹3.30 ಲಕ್ಷ ಕೋಟಿ ಇತ್ತು.

ಜೂನ್‌ ಮೊದಲ ವಾರದಲ್ಲಿ ಷೇರುಪೇಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ₹ 18,589 ಕೋಟಿ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು