ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ನಾಲ್ಕು ಕಂಪನಿಗಳ ಐಪಿಒ: ₹ 14,628 ಕೋಟಿ ಸಂಗ್ರಹ ನಿರೀಕ್ಷೆ

Last Updated 8 ಆಗಸ್ಟ್ 2021, 14:09 IST
ಅಕ್ಷರ ಗಾತ್ರ

ನವದೆಹಲಿ: ಈ ವಾರ ಒಟ್ಟು ನಾಲ್ಕು ಕಂಪನಿಗಳುತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿದ್ದು (ಐಪಿಒ), ಒಟ್ಟಾರೆ ₹ 14,628 ಕೋಟಿ ಸಂಗ್ರಹ ಆಗುವ ನಿರೀಕ್ಷೆ ಇದೆ.

ಕಳೆದ ವಾರ, ವಿಂಡ್ಲಾಸ್ ಬಯೋಟೆಕ್ ಲಿಮಿಟೆಡ್, ದೇವಯಾನಿ ಇಂಟರ್‌ನ್ಯಾಷನಲ್ ಲಿಮಿಟೆಡ್, ಕೃಷ್ಣಾ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್ ಮತ್ತು ಎಕ್ಸಾರೊ ಟೈಲ್ಸ್ ಲಿಮಿಟೆಡ್ ಕಂಪನಿಗಳು ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಿದ್ದವು.

ಕಾರ್ಡ್ ಟ್ರೇಡ್ ಟೆಕ್‌, ನೂವೋಕೋ ವಿಸ್ತಾಸ್ ಕಾರ್ಪೊರೇಷನ್‌, ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ಮತ್ತು ಚೆಂಪ್ಲಾಸ್ಟ್ ಸನ್ಮಾರ್ ಕಂಪನಿಗಳು ಐಪಿಒ ನಡೆಸಲಿವೆ. ಸಾಲ ತೀರಿಸಲು, ದುಡಿಯುವ ಬಂಡವಾಳದ ಅಗತ್ಯ ಹಾಗು ಇನ್ನಿತರ ಕಾರ್ಪೊರೇಟ್‌ ಉದ್ದೇಶಗಳಿಗಾಗಿ ಕಂಪನಿಗಳು ಬಂಡವಾಳ ಸಂಗ್ರಹಿಸಲಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 16 ಕಂಪನಿಗಳು ಐಪಿಒ ಮೂಲಕ ಒಟ್ಟಾರೆಯಾಗಿ ₹ 30,666 ಕೋಟಿ ಸಂಗ್ರಹಿಸಿವೆ. 2020–21ರಲ್ಲಿ ಒಟ್ಟು 30 ಕಂಪನಿಗಳು ₹ 31,277 ಕೋಟಿ ಸಂಗ್ರಹಿಸಿದ್ದವು.

ಇನ್ನೂ 40 ಕಂಪನಿಗಳು ಐಪಿಒಗೆ ಸಿದ್ಧತೆ ನಡೆಸಿದ್ದು ಒಟ್ಟಾರೆ ₹ 70 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಸ್ಯಾಕ್ಟಂ ವೆಲ್ತ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಈಕ್ವಿಟಿ ಮುಖ್ಯಸ್ಥ ಹೇಮಾಂಗ್‌ ಕಪಾಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT