ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್ ತಯಾರಿಕೆ: ಪ್ರತ್ಯೇಕವಾಗಿ ಮುಂದುವರಿಯಲಿರುವ ಫಾಕ್ಸ್‌ಕಾನ್

Published 11 ಜುಲೈ 2023, 13:18 IST
Last Updated 11 ಜುಲೈ 2023, 13:18 IST
ಅಕ್ಷರ ಗಾತ್ರ

ನವದೆಹಲಿ: ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಸಮೂಹದ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಫಾಕ್ಸ್‌ಕಾನ್ ಕಂಪನಿಯು, ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೆ ತಯಾರಿಕಾ ಯೋಜನೆಗೆ ಕೇಂದ್ರದಿಂದ ಉತ್ತೇಜನಕ್ಕೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

‘ಭಾರತದಲ್ಲಿ ಹಾಗೂ ಭಾರತದ ಆಚೆಗೆ ನಾವು ಬಹುಬಗೆಯ ಪಾಲುದಾರರನ್ನು ಬಯಸುತ್ತೇವೆ. ಭಾರತವು ಮುಂದಿನ ಹಂತಕ್ಕೆ ದಾಪುಗಾಲು ಇರಿಸುವುದನ್ನು ಆ ಪಾಲುದಾರರೂ ಬಯಸಬೇಕು. ಅಲ್ಲದೆ, ನಾವು ಹೊಂದಿರುವ ವಿಶ್ವದರ್ಜೆಯ ತಯಾರಿಕಾ ವ್ಯವಸ್ಥೆ ಹಾಗೂ ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಕೊಡುಗೆ ನೀಡುವವರಾಗಿರಬೇಕು’ ಎಂದು ಕಂಪನಿ ಮಂಗಳವಾರ ಹೇಳಿದೆ.

ವೇದಾಂತ ಜೊತೆಗಿನ ಪಾಲುದಾರಿಕೆಯಿಂದ ಹೊರಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಫಾಕ್ಸ್‌ಕಾನ್‌, ಇದು ಎರಡೂ ಕಂಪನಿಗಳು ಸಮ್ಮತಿಯೊಂದಿಗೆ ತೆಗೆದುಕೊಂಡಿರುವ ತೀರ್ಮಾನ ಎಂದು ಹೇಳಿದೆ. ‘ಹೊಸದೊಂದು ಪ್ರದೇಶದಲ್ಲಿ ಸೆಮಿಕಂಡಕ್ಟರ್‌ಗಳ ತಯಾರಿಕೆಯು ಸವಾಲಿನ ಕೆಲಸ. ಆದರೆ ನಾವು ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಬದ್ಧತೆ ಹೊಂದಿದ್ದೇವೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT