ಎಫ್‌ಪಿಐ ಹೊರಹರಿವು ಮುಂದುವರಿಕೆ

7

ಎಫ್‌ಪಿಐ ಹೊರಹರಿವು ಮುಂದುವರಿಕೆ

Published:
Updated:

ನವದೆಹಲಿ: 2019ರಲ್ಲಿಯೂ ವಿದೇಶಿ ಸಾಂಸ್ಥಿಕ ಬಂಡವಾಳದ (ಎಫ್‌ಪಿಐ) ಹೊರಹರಿವು ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಬಳಿಕ ಒಂದು ಸ್ಥಿರ ಸರ್ಕಾರ ರಚನೆ ಆಗುವುದು ಹಾಗೂ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎನ್ನುವ ವಿದ್ಯಮಾನಗಳ ಬಗ್ಗೆ ಖಾತರಿ ಮೂಡದ ಹೊರತು ಬಂಡವಾಳ ಹೂಡಿಕೆಯ ಬಗ್ಗೆ ಏನನ್ನೂ ಹೇಳಲಾಗದು ಎಂದಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) 2018ರಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಿಂದ 83 ಸಾವಿರ ಹಿಂದಕ್ಕೆ ಪಡೆದಿದ್ದಾರೆ. 2002ರ ಬಳಿಕ ಅತಿ ಹೆಚ್ಚಿನ ಬಂಡವಾಳ ಹೊರಹರಿವು ಇದಾಗಿದೆ.

ಅಮೆರಿಕದಲ್ಲಿ ಬಡ್ಡಿದರ ಏರಿಕೆ, ಕಚ್ಚಾ ತೈಲ ದರ ಹೆಚ್ಚಳ ಹಾಗೂ ರೂಪಾಯಿ ಮೌಲ್ಯ ಇಳಿಕೆಯಿಂದ ಬಂಡವಾಳ ಹೊರಹರಿವು ಹೆಚ್ಚಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !