ನವದೆಹಲಿ: ದೇಶದ ಷೇರು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 20ರ ವರೆಗೆ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹33,700 ಕೋಟಿ ಹೂಡಿಕೆ ಮಾಡಿದ್ದಾರೆ.
ಮಾರ್ಚ್‌ನಲ್ಲಿ ₹35,100 ಕೋಟಿ ಹೂಡಿಕೆಯಾಗಿತ್ತು. ಅದಾದ ನಂತರ ಎರಡನೇ ಅತಿಹೆಚ್ಚು ಹೂಡಿಕೆ ಇದಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಇಳಿಕೆ ಮತ್ತು ದೇಶದ ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಈ ಹೂಡಿಕೆಯೊಂದಿಗೆ ಪ್ರಸಕ್ತ ವರ್ಷದಲ್ಲಿ ಎಫ್‌ಪಿಐ ₹76,572 ಕೋಟಿಗೆ ಮುಟ್ಟಿದೆ.