ಮುಂಬೈ: 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ವಂಚನೆ ಮೊತ್ತವು ಮೂರು ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಪಾಲು ಹೆಚ್ಚಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ವಾರ್ಷಿಕ ವರದಿಯು ಗುರುವಾರ ತಿಳಿಸಿದೆ.

2023–24ರಲ್ಲಿ ಒಟ್ಟು 36,060 ವಂಚನೆ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಮೊತ್ತ ₹12,230 ಕೋಟಿ ಆಗಿದೆ. 2024–25ರಲ್ಲಿ 23,953 ಪ್ರಕರಣಗಳು ವರದಿಯಾಗಿದ್ದು, ವಂಚನೆ ಮೊತ್ತ ₹36,014 ಕೋಟಿ ಆಗಿದೆ ಎಂದು ವಿವರಿಸಿದೆ.

ಸಾಲ ಮತ್ತು ಡಿಜಿಟಲ್ ಪಾವತಿ ಮೂಲಕ ನಡೆದಿರುವ ವಂಚನೆ ಹೆಚ್ಚಿದೆ ಎಂದು ಹೇಳಿದೆ.

ಒಟ್ಟಾರೆ ವಂಚನೆ ಪ್ರಕರಣ ಮತ್ತು ಮೊತ್ತದ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಪಾಲು ಶೇ 71ರಷ್ಟಿದೆ. ಸಾಲದ ವಂಚನೆ ಪ್ರಕರಣಗಳೇ ಇದರಲ್ಲಿ ಹೆಚ್ಚಿವೆ. ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಡೆದಿರುವ ಪಾವತಿಯಲ್ಲಿ ಹೆಚ್ಚು ವಂಚನೆ ನಡೆದಿದೆ ಎಂದು ಹೇಳಿದೆ.

2023ರ ಮಾರ್ಚ್ 27ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರ ವಂಚನೆ ಪ್ರಕರಣಗಳ ವರ್ಗೀಕರಣವನ್ನು ಪುನರ್ ಪರಿಶೀಲಿಸಲಾಗಿದೆ. ಹಾಗಾಗಿ, 2024–25ರಲ್ಲಿ ವಂಚನೆ ಮೊತ್ತದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷ ದಲ್ಲಿಯೂ ಭಾರತವು ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಉಳಿಯಲಿದೆ. ಹಣಕಾಸು ವಲಯದ ಸದೃಢತೆಯು ಇದಕ್ಕೆ ನೆರವಾಗಲಿದೆ
ಭಾರತೀಯ ರಿಸರ್ವ್ ಬ್ಯಾಂಕ್ನ 2024–25ನೇ ವಾರ್ಷಿಕ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.