ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಮಂಡ್‌ನ ಸುಲಲಿತ ವಹಿವಾಟಿಗೆ ಬದ್ಧ: ಸಿಂಘಾನಿಯಾ

Published 27 ನವೆಂಬರ್ 2023, 16:05 IST
Last Updated 27 ನವೆಂಬರ್ 2023, 16:05 IST
ಅಕ್ಷರ ಗಾತ್ರ

ನವದೆಹಲಿ: ರೇಮಂಡ್‌ ಕಂಪನಿಯ ಕಾರ್ಯಾಚರಣೆಯನ್ನು ಸುಲಲಿತವಾಗಿ ನಡೆಸಲು ಬದ್ಧ ಇರುವುದಾಗಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಉದ್ಯೋಗಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಭರವಸೆ ನೀಡಿದ್ದಾರೆ.

ಪತ್ನಿ ನವಾಜ್‌ಗೆ ವಿಚ್ಛೇದನ ನೀಡಿರುವುದಾಗಿ ಸಿಂಘಾನಿಯಾ ಅವರು ನವೆಂಬರ್ 13ರಂದು ತಿಳಿಸಿದ್ದರು. ಈ ಕುರಿತಾಗಿ ಮಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯೋಗಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಇ–ಮೇಲ್ ಮಾಡಿದ್ದಾರೆ. ‘ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಾಧ್ಯಮಗಳ ವರದಿಗೆ ಪ್ರತಿಕ್ರಿಯೆ ನೀಡದಿರಲು ಬಯಸಿದ್ದೇನೆ. ನನ್ನ ಕುಟುಂಬದ ಘನತೆ ಕಾಪಾಡಿಕೊಳ್ಳುವುದು ನನಗೆ ಮುಖ್ಯ’ ಎಂದು ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT