ಶುಕ್ರವಾರ, ನವೆಂಬರ್ 15, 2019
22 °C

ಒಂದೇ ತ್ರೈಮಾಸಿಕದಿಂದ ಆರ್ಥಿಕ ಪ್ರಗತಿ ಅಳೆಯಲಾಗದು: ವಿವೇಕ್‌ ದೆಬೊರಾಯ್‌

Published:
Updated:

ಕೋಲ್ಕತ್ತ: ‘ಕೇವಲ ಒಂದು ತ್ರೈಮಾಸಿಕ ಅಂಕಿ–ಅಂಶ ಗಮನದಲ್ಲಿ ಇಟ್ಟುಕೊಂಡು ದೇಶದ ಆರ್ಥಿಕ ವೃದ್ಧಿ ದರವು ಶೇ 5ರಂತೆ ಬೆಳವಣಿಗೆ ಸಾಧಿಸುತ್ತಿದೆ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ’ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್‌ ದೆಬೊರಾಯ್‌ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ 5ರಷ್ಟಾಗಿದ್ದು, ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ. ಇದರ ಆಧಾರದ ಮೇಲೆ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ನಿರ್ಧರಿಸುವುದು ಸರಿಯಲ್ಲಿ ಎಂದಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಬ್ಯಾಂಕಿಂಗ್‌ ವಿಚಾರಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ ಈ ಹಿಂದೆಯೂ ತ್ರೈಮಾಸಿಕವೊಂದರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 5ಕ್ಕಿಂತಲೂ ಕೆಳಕ್ಕೆ ಕುಸಿದ ನಿದರ್ಶನಗಳಿವೆ. ಆದರೆ ನಂತರದ ತ್ರೈಮಾಸಿದಲ್ಲಿ ಶೇ 7ಕ್ಕೆ ಏರಿಕೆ ಕಂಡಿದೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)