ಭಾನುವಾರ, ಜುಲೈ 25, 2021
22 °C

ಶುರುವಾಗಿದೆ ಆರ್ಥಿಕ ಪುನಶ್ಚೇತನ: ಐಸಿಆರ್‌ಎ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸ್ಥಳೀಯ ಮಟ್ಟದಲ್ಲಿ ಜಾರಿಯಲ್ಲಿ ಇದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರದಲ್ಲಿ ಆರ್ಥಿಕ ಪುನಶ್ಚೇತನವು ವೇಗ ಪಡೆದುಕೊಂಡಿದೆ ಎಂದು ರೇಟಿಂಗ್ಸ್ ಏಜೆನ್ಸಿ ಐಸಿಆರ್‌ಎ ಹೇಳಿದೆ. ಹೀಗಿದ್ದರೂ, ಪುನಶ್ಚೇತನವು ಪೂರ್ಣ ಪ್ರಮಾಣದಲ್ಲಿ ವೇಗಪಡೆದುಕೊಂಡಿಲ್ಲ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.

ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಎರಡು ಅಂಕಿಗಳ ಬೆಳವಣಿಗೆ ಸಾಧಿಸಿದೆ. ಆದರೆ ಇದು 2019–20ರ ಮೊದಲ ತ್ರೈಮಾಸಿಕದಲ್ಲಿ ಕಂಡಿದ್ದ ಬೆಳವಣಿಗೆಗೆ ಹೋಲಿಸಿದರೆ ಕಡಿಮೆ ಎಂದು ಅದು ಹೇಳಿದೆ.

ರಾಜ್ಯಗಳ ಮಟ್ಟದಲ್ಲಿ ಜಾರಿಗೆ ಬಂದಿದ್ದ ಲಾಕ್‌ಡೌನ್‌ಗಳನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆಗೆ ಕಾರಣವಾಗಿದೆ. ಆದರೂ, ಆರ್ಥಿಕ ಆರೋಗ್ಯದ ಪ್ರಮುಖ ಸೂಚಕಗಳ ಮಟ್ಟವು ಕೂವಿಡ್‌ಗೂ ಮೊದಲಿನ ಸ್ಥಿತಿಗಿಂತ ಕೆಳಗೆ ಇದೆ ಎಂದು ಸಂಸ್ಥೆಯ ವರದಿಯು ಹೇಳಿದೆ.

‘ಆರ್ಥಿಕ ಪುನಶ್ಚೇತನ ಶುರುವಾಗಿದೆ ಎಂಬುದನ್ನು ಆರ್ಥಿಕ ಚಟುವಟಿಕೆಯ ಸೂಚಕಗಳು ಖಚಿತಪಡಿಸಿವೆ. ಆದರೆ, ಪುಶ್ಚೇತನವು ಪೂರ್ತಿ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು