ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನ, ಚಿನ್ನಾಭರಣ ರಫ್ತು ಶೇ 5.76ರಷ್ಟು ಹೆಚ್ಚಳ

Last Updated 21 ಜನವರಿ 2022, 11:58 IST
ಅಕ್ಷರ ಗಾತ್ರ

ನವದೆಹಲಿ: ರತ್ನ ಮತ್ತು ಆಭರಣಗಳ ರಫ್ತು 2021ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಶೇ 5.76ರಷ್ಟು ಹೆಚ್ಚಾಗಿದ್ದು, ₹ 2.15 ಲಕ್ಷ ಕೋಟಿಗಳಿಗೆ ತಲುಪಿದೆ.

ಅಮೆರಿಕ, ಹಾಂಗ್‌ಕಾಂಗ್‌ ಮತ್ತು ಥಾಯ್ಲೆಂಡ್‌ನಿಂದ ಉತ್ತಮ ಬೇಡಿಕೆ ಬಂದಿದ್ದರಿಂದ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

ಅಮೆರಿಕ, ಹಾಂಗ್‌ಕಾಂಗ್‌, ಥಾಯ್ಲೆಂಡ್‌ ಮತ್ತು ಇಸ್ರೇಲ್‌ನಲ್ಲಿ ರಜಾದಿನ ಮತ್ತು ಹಬ್ಬದ ಬೇಡಿಕೆಯು ಹೆಚ್ಚಾಗಿದೆ. ಈ ಬೇಡಿಕೆಯು ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೂ ಮುಂದುವರಿಯುವ ನಿರೀಕ್ಷೆ ಇದ್ದು, ರಫ್ತು ಮೌಲ್ಯವು ₹ 3.08 ಲಕ್ಷ ಕೋಟಿ ಗುರಿಯ ಸಮೀಪಕ್ಕೆ ಬರಲಿದೆ ಎಂದು ಮಂಡಳಿಯ ಅಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.

ಬೆಳ್ಳಿ ಆಭರಣಗಳ ರಫ್ತು ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ಶೇ 94ರಷ್ಟು ಹೆಚ್ಚಾಗಿ ₹ 14,504 ಕೋಟಿಗಳಿಗೆ ತಲುಪಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT