ಭಾನುವಾರ, ಅಕ್ಟೋಬರ್ 25, 2020
22 °C

ರಿಲಯನ್ಸ್ ರಿಟೇಲ್‌ನಲ್ಲಿ ಜನರಲ್ ಅಟ್ಲಾಂಟಿಕ್ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಜಾಗತಿಕ ಹೂಡಿಕೆ ಸಂಸ್ಥೆ ಜನರಲ್ ಅಟ್ಲಾಂಟಿಕ್, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಅಂಗಸಂಸ್ಥೆ ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ನಲ್ಲಿ (ಆರ್‌ಆರ್‌ವಿಎಲ್‌) ₹ 3,675 ಕೋಟಿ ಹೂಡಿಕೆ ಮಾಡಲಿದೆ ಎಂದು ಆರ್‌ಐಎಲ್‌ ಬುಧವಾರ ತಿಳಿಸಿದೆ.

ಈ ಹೂಡಿಕೆಯ ಮೂಲಕ ಜನರಲ್ ಅಟ್ಲಾಂಟಿಕ್‌ ಕಂಪನಿಯು ಆರ್‌ಆರ್‌ವಿಎಲ್‌ನ ಶೇಕಡ 0.84ರಷ್ಟು ಪಾಲನ್ನು ಖರೀದಿಸಿದಂತೆ ಆಗುತ್ತದೆ. ಜನರಲ್ ಅಟ್ಲಾಂಟಿಕ್ ಕಂಪನಿಯು ಈ ವರ್ಷದ ಆರಂಭದಲ್ಲಿ ರಿಲಯನ್ಸ್‌ನ ಜಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಒಟ್ಟು ₹ 6,598.38 ಕೋಟಿ ಹೂಡಿಕೆಯ ಘೋಷಣೆ ಮಾಡಿತ್ತು.

ಆರ್‌ಆರ್‌ವಿಎಲ್‌ ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ದೇಶದ ರೈತ ಸಮುದಾಯ ಮತ್ತು ಎಂಎಸ್‌ಎಂಇ ವಲಯವನ್ನು ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ತನ್ನದು ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು