ಸೋಮವಾರ, ಜೂನ್ 1, 2020
27 °C

ಗೋವಾದಲ್ಲಿ ‘ಜಿಂಜರ್’ ಹೋಟೆಲ್‌

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

Deccan Herald

ಪಣಜಿ: ಆತಿಥ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಜಿಂಜರ್‌’ ಹೋಟೆಲ್‌ ಈಗ ಗೋವಾದಲ್ಲಿ ಕಾರ್ಯಾರಂಭ ಮಾಡಿದೆ.

ನವೀಕರಣಗೊಂಡಿರುವ, ಸುಸಜ್ಜಿತ ಹಾಗೂ ಆಧುನಿಕ ಸ್ಪರ್ಶದೊಂದಿಗೆ ‘ಜಿಂಜರ್‌’ ಹೋಟೆಲ್‌ ಅನ್ನು ಇಲ್ಲಿ ಆರಂಭಿಸಲಾಗಿದೆ.
ಪ್ರವಾಸಿಗರ ಪಾಲಿಗೆ ಅತ್ಯಂತ ಆಕರ್ಷಕ ತಾಣವಾಗಿರುವ ಗೋವಾಕ್ಕೆ ದೇಶ ಮತ್ತು ವಿದೇಶಗಳ ಪ್ರವಾಸಿಗರು ಬರುತ್ತಾರೆ. ಹೀಗಾಗಿ, 110 ಕೊಠಡಿಗಳಿರುವ ಈ ಹೋಟೆಲ್‌, ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಆತಿಥ್ಯ ನೀಡಲಿದೆ.

‘ಜಿಂಜರ್‌ ಸಮೂಹದ 46ನೇ ಹೋಟೆಲ್‌ ಇದಾಗಿದೆ. ಜಾಗತಿಕ ಮತ್ತು ಸ್ಥಳೀಯರು ಸೇರಿದಂತೆ ಎಲ್ಲ ವರ್ಗದ ಗ್ರಾಹಕರ ಆಶಯಗಳನ್ನು ಈಡೇರಿಸುವ ಉದ್ದೇಶವನ್ನು ಇದು ಹೊಂದಿದೆ. ಸಂಸ್ಥೆಯ ಈ ಹೋಟೆಲ್‌ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವೂ ಆಗಲಿದೆ’ ಎಂದು ಇಂಡಿಯನ್‌ ಹೋಟೆಲ್ಸ್‌ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ  ಪುನೀತ್‌ ಚಾತ್ವಾಲ್‌ ತಿಳಿಸಿದ್ದಾರೆ.

‘ಗ್ರಾಹಕರಿಗೆ ಕೈಗೆಟುಕುವ ದರದಲ್ಲೇ ಅತ್ಯುತ್ತಮ ಸೇವೆ ಒದಗಿಸುವುದು ಜಿಂಜರ್‌ ಉದ್ದೇಶವಾಗಿದೆ. ಮರುವಿನ್ಯಾಸಗೊಂಡಿರುವ ಈ ಹೋಟೆಲ್‌ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ರುಚಿಕರ, ವೈವಿಧ್ಯಮಯ ಆಹಾರ ಹಾಗೂ ಉತ್ತಮ ಸೇವೆ ಒದಗಿಸುವುದು ಇಲ್ಲಿನ ವಿಶೇಷ’ ಎಂದು  ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕಿ  ದೀಪಿಕಾ ರಾವ್ ತಿಳಿಸಿದ್ದಾರೆ.

‘ಜಿಂಜರ್‌ ಸಮೂಹವನ್ನು ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಕೆಲವೇ ತಿಂಗಳಲ್ಲಿ 6 ಹೊಸ ಹೋಟೆಲ್‌ಗಳು ದೇಶದ ವಿವಿಧೆಡೆ ಆರಂಭವಾಗಲಿವೆ’ ಎಂದಿದ್ದಾರೆ.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಪಣಜಿಗೆ ತೆರಳಿದ್ದರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು