ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: ಸೆಬಿಗೆ ಕರಡು ದಾಖಲೆ ಸಲ್ಲಿಸಿದ ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸ್

Last Updated 17 ಏಪ್ರಿಲ್ 2021, 11:15 IST
ಅಕ್ಷರ ಗಾತ್ರ

ನವದೆಹಲಿ: ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಕರಡು ದಾಖಲೆಪತ್ರಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ ಎಂದು ಮಾತೃಸಂಸ್ಥೆ ಗ್ಲೆನ್‌ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್‌ ಶನಿವಾರ ಮಾಹಿತಿ ನೀಡಿದೆ.

₹ 1,160 ಕೋಟಿ ಮೊತ್ತದ ಹೊಸ ಷೇರುಗಳು ಹಾಗೂ ಆಫರ್‌ ಫಾರ್‌ ಸೇಲ್‌ (ಒಎಫ್‌ಸಿ) ಮೂಲಕ ₹ 2ರ ಮುಖಬೆಲೆಯ 73,05,245ರವರೆಗಿನ ಷೇರುಗಳನ್ನು ಖರೀದಿಗೆ ಮುಕ್ತವಾಗಿಸಲಿದೆ ಎಂದು ಷೇರುಪೇಟೆಗೆ ಸಲ್ಲಿಸಿರುವ ಮಾಹಿತಿಯಲ್ಲಿದೆ.

₹ 2ರ ಮುಖಬೆಲೆಯ 73,05,245ರವರೆಗಿನ ಷೇರುಗಳನ್ನು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡಲು ಗ್ಲೆನ್‌ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯ ಆಡಳಿತ ಮಂಡಳಿಯು ಶುಕ್ರವಾರ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT