ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Go First Airlines: 54 ವಿಮಾನ ಮರಳಿಸಲು ಗೋ ಫಸ್ಟ್‌ಗೆ ಆದೇಶ

Published 27 ಏಪ್ರಿಲ್ 2024, 14:24 IST
Last Updated 27 ಏಪ್ರಿಲ್ 2024, 14:24 IST
ಅಕ್ಷರ ಗಾತ್ರ

ನವದೆಹಲಿ: ಗುತ್ತಿಗೆ ಪಡೆದಿದ್ದ 54 ವಿಮಾನಗಳನ್ನು ಗುತ್ತಿಗೆದಾರರಿಗೆ ಮರಳಿಸುವಂತೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ವಿಮಾನಯಾನ ಕಂಪನಿಗೆ, ದೆಹಲಿ ಹೈಕೋರ್ಟ್‌ ಆದೇಶಿಸಿದೆ. 

ವಿಮಾನಗಳನ್ನು ವಾಪಸ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಈ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು, ವಿಮಾನಗಳ ಸುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಸಹಕಾರ ನೀಡಬೇಕು’ ಎಂದು ಸೂಚಿಸಿದೆ.‌

ಐದು ದಿನಗಳಲ್ಲಿ ಈ ಪ್ರಕ್ರಿಯೆಯನ್ನು ‍ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಬ್ಯುಸಿ ಬೀ ಏರ್‌ವೇಸ್‌ ಕಂಪನಿ ಮತ್ತು ಸ್ಪೈಸ್‌ಜೆಟ್‌ನ ಮುಖ್ಯಸ್ಥ ಅಜಯ್‌ ಸಿಂಗ್‌ ಜಂಟಿಯಾಗಿ ಗೋ ಫಸ್ಟ್‌ಗೆ ಬಿಡ್‌ ಸಲ್ಲಿಸಿದ್ದಾರೆ. ಟ್ರಾವೆಲ್‌ ಪೋರ್ಟಲ್ ಈಸ್‌ಮೈಟ್ರಿಪ್‌ ಸಂಸ್ಥೆಯ ಸಹ ಸಂಸ್ಥಾಪಕ ನಿಶಾಂತ್‌ ಪಿಟ್ಟಿ ಅವರು, ಬ್ಯುಸಿ ಏರ್‌ವೇಸ್‌ನಲ್ಲಿ ಅತಿಹೆಚ್ಚಿನ ಷೇರುಗಳ ಮೇಲೆ ಒಡೆತನ ಹೊಂದಿದ್ದಾರೆ.

‘ಹೈಕೋರ್ಟ್‌ ನೀಡಿರುವ ಆದೇಶವನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪಿಟ್ಟಿ ಅವರು, ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಗೋ ಫಸ್ಟ್‌ ಕಂಪನಿಯು ಕಳೆದ ವರ್ಷದ ಮೇ 3ರಂದು ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ)  ಮುಂದೆ ಸ್ವಯಂಪ್ರೇರಿತವಾಗಿ ದಿವಾಳಿ ಪ್ರಕ್ರಿಯೆಯನ್ನು ಮಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT