ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹ 513ರಷ್ಟು ಹೆಚ್ಚಾಗಿ ₹ 49,738ಕ್ಕೆ ತಲುಪಿತು.
ಬೆಳ್ಳಿ ಧಾರಣೆ ಕೆ.ಜಿ.ಗೆ ₹ 190ರಷ್ಟು ಹೆಚ್ಚಾಗಿ ₹ 63,222ರಂತೆ ಮಾರಾಟವಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪ್ರಭಾವ ಕಂಡುಬಂದಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.