ನವದೆಹಲಿ:ದೇಶದಲ್ಲಿ ಚಿನ್ನದ ದರ ₹332 ಜಿಗಿತ ಕಂಡಿದ್ದು, 10 ಗ್ರಾಂಗೆ ₹39,299 ತಲುಪಿದೆ. ಎಚ್ಡಿಎಫ್ ಸೆಕ್ಯುರಿಟೀಸ್ ಪ್ರಕಾರ,ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಗಳ ಬೆನ್ನಲೇ ಚಿನ್ನ ದರ ಏರಿಕೆಯಾಗಿದೆ.

ಕಳೆದ ವಹಿವಾಟಿನಲ್ಲಿ 10 ಗ್ರಾಂ ಚಿನ್ನ ₹38,967ರಲ್ಲಿ ಮುಕ್ತಾಯಗೊಂಡಿತ್ತು.

ಇದನ್ನೂ ಓದಿ:ಏರುತ್ತಲೇ ಇದೆ ಚಿನ್ನ ದರ: ಖರೀದಿಗೆ ಇದು ಸಕಾಲ

ಬುಧವಾರ ಬೆಳಿಗ್ಗೆ ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಕುಸಿಯುವ ಮೂಲಕ ₹71.78ರಲ್ಲಿ ವಹಿವಾಟು ನಡೆಯಿತು. ಚಿನ್ನ ಖರೀದಿಯಲ್ಲೂ ಹೆಚ್ಚಳ ಕಂಡಿದ್ದರಿಂದ 24 ಕ್ಯಾರೆಟ್ನ 10 ಗ್ರಾಂ ಚಿನ್ನ ದರ ದೆಹಲಿಯಲ್ಲಿ ₹332 ಹೆಚ್ಚಿತು. ಬೆಳ್ಳಿ ದರ ಪ್ರತಿ ಕೆ.ಜಿಗೆ ₹676 ಜಿಗಿಯುವ ಮೂಲಕ ₹46,672 ಮುಟ್ಟಿತು. ಕಳೆದ ವಹಿವಾಟಿನಲ್ಲಿ ₹45,996ಕ್ಕೆ ಮುಕ್ತಾಯಗೊಂಡಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ (28.34 ಗ್ರಾಂ) ಚಿನ್ನ 1,483 ಅಮೆರಿಕನ್ ಡಾಲರ್ನಲ್ಲಿ ವಹಿವಾಟು ಕಂಡಿದೆ, ಬೆಳ್ಳಿ ಪ್ರತಿ ಔನ್ಸ್ಗೆ 17.27 ಅಮೆರಿಕನ್ ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.