ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಗ್ರಾಂ ಚಿನ್ನದ ದರ ₹ 694ರಷ್ಟು ಇಳಿಕೆ

Last Updated 4 ಡಿಸೆಂಬರ್ 2020, 10:55 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಮೂರು ದಿನಗಳಿಂದ ಏರಿಳಿತ ಕಾಣುತ್ತಿದೆ. ಮಂಗಳವಾರ ಏರಿಕೆಯಾಗಿದ್ದ ಚಿನ್ನದ ದರ ಬುಧವಾರ ಇಳಿಕೆ ಕಂಡಿದೆ.

10 ಗ್ರಾಂ ಚಿನ್ನದ ದರ ₹ 694ರಷ್ಟು ಇಳಿಕೆಯಾಗಿ ₹ 51,215ರಂತೆ ಮಾರಾಟವಾಗಿದೆ. ಮಂಗಳವಾರ ಇದು ₹ 51,909 ಆಗಿತ್ತು. ರೂಪಾಯಿ ಮೌಲ್ಯ ವೃದ್ಧಿಯಾಗಿರುವುದೇ ಚಿನ್ನದ ದರ ಇಳಿಕೆಗೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹ 126ರಷ್ಟು ಹೆಚ್ಚಾಗಿ ₹ 63,427ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT