ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ ₹ 761 ಏರಿಕೆ

Last Updated 16 ಜೂನ್ 2020, 15:17 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಧಾರಣೆಯು ಮಂಗಳವಾರದ ವಹಿವಾಟಿನಲ್ಲಿ ಗರಿಷ್ಠ ₹ 761ರಂತೆ ಏರಿಕೆಯಾಗಿದ್ದು, ₹ 48,414ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ₹540ರಂತೆ ಹಾಗೂಮುಂಬೈನಲ್ಲಿ ₹491ರಂತೆ ಹೆಚ್ಚಾಗಿ ಕ್ರಮವಾಗಿ ₹ 48,400 ಮತ್ತು ₹ 47,350ರಂತೆ ಮಾರಾಟವಾಗಿದೆ.

ಬೆಳ್ಳಿ ಧಾರಣೆ ದೆಹಲಿಯಲ್ಲಿ ಕೆ.ಜಿಗೆ ₹ 1,308ರಂತೆ ಹಾಗೂ ಬೆಂಗಳೂರಿನಲ್ಲಿ ₹ 1,000 ಹೆಚ್ಚಾಗಿ, ಕ್ರಮವಾಗಿ ₹ 49,204 ಮತ್ತು ₹ 48,400ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಹಾಗೂ ರೂಪಾಯಿ ಮೌಲ್ಯ ಇಳಿಕೆಯು ದೇಶಿ ಚಿನಿವಾರ ಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT