ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನದ ದರವು ₹400 ಏರಿಕೆಯಾಗಿದ್ದು, ₹78,250ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಬೆಳ್ಳಿ ದರವು ಪ್ರತಿ ಕೆ.ಜಿಗೆ ₹1 ಸಾವಿರ ಏರಿಕೆಯಾಗಿದ್ದು, ₹94 ಸಾವಿರಕ್ಕೆ ಮುಟ್ಟಿದೆ. ದೇಶೀಯ ಆಭರಣ ತಯಾರಕರಿಂದ ಖರೀದಿ ಹೆಚ್ಚಳದಿಂದಾಗಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗುತ್ತಿದೆ.