ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಮ್ಯಾಪ್‌ನಲ್ಲಿ ನಕಲಿ ಬಿಸಿನೆಸ್‌ ‌ಪ್ರೊಫೈಲ್‌ಗಳಿವೆ!

ಕಳೆದ ವರ್ಷ 30 ಲಕ್ಷ ಖಾತೆಗಳನ್ನು ಕೈಬಿಟ್ಟ ಗೂಗಲ್
Last Updated 24 ಜೂನ್ 2019, 19:16 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರನ್ನು ವಂಚಿಸುತ್ತಿದ್ದ, ಗೂಗಲ್‌ ಮ್ಯಾಪ್‌ನಲ್ಲಿದ್ದ 30 ಲಕ್ಷಕ್ಕೂ ಅಧಿಕ ಬಿಸಿನೆಸ್‌ ಪ್ರೊಫೈಲ್‌ಗಳನ್ನು ತೆಗೆದುಹಾಕಲಾಗಿದೆ ಎಂದು ತಂತ್ರಜ್ಞಾನ ಸಂಸ್ಥೆ ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

‘ನಕಲಿ ಉದ್ದಿಮೆಗಳು ಲಾಭ ಮಾಡಿಕೊಳ್ಳಲು ವಂಚಕರ ನೆರವು ಪಡೆಯುತ್ತಿವೆ. ನಿಜವಾಗಿಯೂ ಉದ್ದಿಮೆ ಇದೆ ಎನ್ನುವ ರೀತಿಯಲ್ಲಿ ಬಿಂಬಿಸಿ ಗ್ರಾಹಕರನ್ನು ಮೋಸಗೊಳಿಸಲಾಗುತ್ತಿದೆ’ ಎಂದು ಗೂಗಲ್‌ ಮ್ಯಾಪ್‌ನ ಉತ್ಪನ್ನ ನಿರ್ದೇಶಕ ಎಥನ್‌ ರಸೆಲ್‌ ತಿಳಿಸಿದ್ದಾರೆ.

ಗೂಗಲ್‌ ಮ್ಯಾಪ್‌ಗೆ 20 ಕೋಟಿಗೂ ಅಧಿಕ ಸ್ಥಳಗಳನ್ನು ಸೇರಿಸಲಾಗಿದೆ. ಪ್ರತಿ ತಿಂಗಳೂ 900 ಕೋಟಿಗೂ ಅಧಿಕ ಬಾರಿ ಜನರನ್ನು ಉದ್ದಿಮೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಗೂಗಲ್‌ ಹೇಳಿದೆ.

ವಂಚನೆ ಹೇಗೆ?: ದಿನವೂ ಎದುರಾಗಬಹುದಾದ ಸಮಸ್ಯೆಗಳು ಮತ್ತು ಅದಕ್ಕೆ ಜನರು ಕಂಡುಕೊಳ್ಳಬಹುದಾದ ಪರಿಹಾರಗಳನ್ನು ಗಮನ
ದಲ್ಲಿಟ್ಟುಕೊಂಡು ವಂಚನೆ ಎಸಗಲಾಗುತ್ತಿದೆ. ಉದಾಹರಣೆಗೆ ನಿಮ್ಮ ಮನೆಯ ನಲ್ಲಿ ದುರಸ್ತಿ ಮಾಡಬೇಕು ಎಂದುಕೊಳ್ಳಿ. ತಕ್ಷಣಕ್ಕೆ ಗೂಗಲ್‌ನಲ್ಲಿ ವಿಳಾಸ ಹುಡುಕುವಿರಿ. ಆಗ ದುರಸ್ತಿ ಮಾಡುವವರ ವಿಳಾಸ, ಫೋನ್‌ ನಂಬರ್‌ ಎಲ್ಲವೂ ಕಾಣಿಸುತ್ತದೆ.

ವಂಚ‌ಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಅಲ್ಲಿ ಒಂದು ವಂಚಕ ಕಂಪನಿಯ ಪ್ರೊಫೈಲ್‌ ಸೃಷ್ಟಿಸಿ, ಗ್ರಾಹಕರಿಂದ ಮುಂಚಿತವಾಗಿಯೇ ಹಣ ಪಡೆಯಲಾಗುತ್ತದೆ. ಸೇವೆ ದೊರೆಯದೇ ಇದ್ದಾಗ ಮೋಸ ಹೋಗಿರುವುದು ಅರಿವಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT