ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಬಿಗೆ ಮೊದಲ ಮಹಿಳಾ ಅಧ್ಯಕ್ಷೆ ನೇಮಕ: ಮಾಧವಿ ಪುರಿ ಬುಚ್‌ಗೆ ಅಧಿಕಾರ

Last Updated 28 ಫೆಬ್ರುವರಿ 2022, 13:00 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮಾಧವಿ ಪುರಿ ಬುಚ್‌ ಅವರನ್ನು ನೇಮಿಸಲಾಗಿದೆ.‌ ಸೆಬಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಆಗಿರುವ ಮೊದಲ ಮಹಿಳೆ ಮಾಧವಿ.

ಹಾಲಿ ಅಧ್ಯಕ್ಷ ಅಜಯ್‌ ತ್ಯಾಗಿ ಅವರ ಐದು ವರ್ಷಗಳ ಅವಧಿಯು ಮುಗಿಯಲಿದ್ದು, ಅವರ ಸ್ಥಾನಕ್ಕೆ ಈ ನೇಮಕಾತಿ ನಡೆದಿದೆ. ಸಂಪುಟದ ನೇಮಕಾತಿ ಸಮಿತಿಯು ಮೂರು ವರ್ಷಗಳ ಅವಧಿಗೆ ಮಾಧವಿ ಅವರ ನೇಮಕಕ್ಕೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸೆಬಿಯ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಶಾಂಘೈನಲ್ಲಿ ನ್ಯೂ ಡೆವಲಪ್ಮೆಂಟ್‌ ಬ್ಯಾಂಕ್‌ನ ಸಲಹೆಗಾರಾಗಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT