ನವದೆಹಲಿ: ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಆಕ್ಸಿಮೀಟರ್, ಡಿಜಿಟಲ್ ಥರ್ಮೋಮೀಟರ್‌ನಂತಹ ಅಗತ್ಯ ವೈದ್ಯಕೀಯ ಉಪಕರಣಗಳ ತಯಾರಿಕಾ ವೆಚ್ಚ ಹಾಗೂ ಮಾರಾಟದ ಬೆಲೆಯ ನಡುವಿನ ವ್ಯತ್ಯಾಸವು ಶೇಕಡ 70ರಷ್ಟಕ್ಕಿಂತ ಜಾಸ್ತಿ ಆಗುವಂತಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.

ರಾಷ್ಟ್ರೀಯ ವೈದ್ಯಕೀಯ ಮತ್ತು ಔಷಧೀಯ ವಸ್ತುಗಳ ಬೆಲೆ ನಿಗದಿ ಆಯೋಗವು (ಎನ್‌ಪಿಪಿಎ) ಆಕ್ಸಿಮೀಟರ್, ಗ್ಲೂಕೊಮೀಟರ್, ರಕ್ತದೊತ್ತಡ ಪರೀಕ್ಷಕ, ನೆಬ್ಯುಲೈಸರ್ ಮತ್ತು ಡಿಜಿಟಲ್ ಥರ್ಮೋಮೀಟರ್ ವಿಚಾರವಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಇವು ಜುಲೈ 20ರಿಂದ ಅನ್ವಯ ಆಗಲಿವೆ. ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈಗ ಈ ವಸ್ತುಗಳ ತಯಾರಿಕಾ ವೆಚ್ಚ ಹಾಗೂ ಮಾರಾಟದ ಬೆಲೆಯ ನಡುವಿನ ವ್ಯತ್ಯಾಸವು ಶೇಕಡ 3ರಿಂದ ಶೇಕಡ 709ರವರೆಗೂ ಇದೆ ಎಂದು ಎನ್‌ಪಿಪಿಎ ಟ್ವೀಟ್‌ನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.