ಭಾನುವಾರ, ಆಗಸ್ಟ್ 18, 2019
25 °C
ಕೇಂದ್ರ ಸಚಿವ ಸಂಪುಟದ ಸಮ್ಮತಿ

ದಿವಾಳಿ ಸಂಹಿತೆ ತಿದ್ದುಪಡಿಗೆ ಸಮ್ಮತಿ

Published:
Updated:

ನವದೆಹಲಿ (ಪಿಟಿಐ): ವಸೂಲಾಗದ ಸಾಲದ ಪ್ರಕರಣಗಳನ್ನು ಕಾಲಮಿತಿ ಒಳಗೆ ಇತ್ಯರ್ಥಪಡಿಸಲು ನೆರವಾಗಲು ದಿವಾಳಿ ಸಂಹಿತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆಗೆ (ಐಬಿಸಿ) ಏಳು ತಿದ್ದುಪಡಿ ತರುವುದಕ್ಕೆ ಕೇಂದ್ರ ಸಚಿವ ಸಂಪುಟವು  ಅನುಮೋದನೆ ನೀಡಿದೆ. ವಸೂಲಾಗದ ಸಾಲದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಇದರಿಂದ ಸಾಧ್ಯ
ವಾಗಲಿದೆ. ಗರಿಷ್ಠ 330 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ವಿಧಿಸಲಾಗಿದೆ.

ಕಾರ್ಪೊರೇಟ್‌ಗಳು ಬಾಕಿ ಉಳಿಸಿಕೊಂಡಿರುವ ಸಾಲಕ್ಕೆ ಪರಿಹಾರ ಕಂಡುಕೊಳ್ಳುವ ಮತ್ತು ಈ ಪ್ರಕ್ರಿಯೆಯಿಂದ ಗರಿಷ್ಠ ಮೊತ್ತ ವಸೂಲಿ ಮಾಡುವುದಕ್ಕೆ ಇದ್ದ ಪ್ರಮುಖ ಲೋಪ ಸರಿಪಡಿಸಲು ಈ ತಿದ್ದುಪಡಿಗಳು ನೆರವಾಗಲಿವೆ.

Post Comments (+)