ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಸ್ಮತಿಯೇತರ ಅಕ್ಕಿ ರಫ್ತಿಗೆ ಅನುಮತಿ

Published : 28 ಸೆಪ್ಟೆಂಬರ್ 2024, 15:48 IST
Last Updated : 28 ಸೆಪ್ಟೆಂಬರ್ 2024, 15:48 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸರ್ಕಾರವು ಭಾಸ್ಮತಿಯೇತರ ಅಕ್ಕಿ ಮೇಲೆ ವಿಧಿಸಿದ್ದ ರಫ್ತು ನಿಷೇಧವನ್ನು ಶನಿವಾರ ವಾ‍ಪಸ್ ಪಡೆದಿದೆ. ಕನಿಷ್ಠ ರಫ್ತು ದರವನ್ನು (ಎಂಇಪಿ) 490 ಡಾಲರ್‌ಗೆ (₹41,022) ನಿಗದಿಪಡಿಸಿದೆ. 

‘ಮುಂದಿನ ಸೂಚನೆವರೆಗೂ ಈ ಆದೇಶ ಜಾರಿಯಲ್ಲಿ ಇರಲಿದೆ’ ಎಂದು ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

ದೇಶೀಯ ಪೂರೈಕೆ ಹೆಚ್ಚಳಕ್ಕೆ ಒತ್ತು ನೀಡುವ ದೃಷ್ಟಿಯಿಂದ ಕಳೆದ ವರ್ಷದ ಜುಲೈ 20ರಿಂದ ಭಾಸ್ಮತಿಯೇತರ ಅಕ್ಕಿ ರಫ್ತಿಗೆ ನಿಷೇಧ ಹೇರಲಾಗಿತ್ತು. 

‌‌ಕುಚ್ಚಲಕ್ಕಿ ಮೇಲೆ ವಿಧಿಸಿದ್ದ ಶೇ 20ರಷ್ಟು ರಫ್ತು ಸುಂಕವನ್ನು ಶೇ 10ಕ್ಕೆ ಇಳಿಸಿದೆ.

ಬಾಸ್ಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ದರವನ್ನೂ ಸರ್ಕಾರ ಕಳೆದ ಎರಡು ವಾರದ ರದ್ದುಪಡಿಸಿತ್ತು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT