ನವದೆಹಲಿ: ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸುವ ಕೊಬ್ಬರಿಯ (ಮಿಲ್ಲಿಂಗ್ ಕೊಪ್ರಾ) ಮತ್ತು ತಿನ್ನುವ ಕೊಬ್ಬರಿಯ (ಬಾಲ್ ಕೊಪ್ರಾ) ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೇಂದ್ರ ಸರ್ಕಾರವು ಕ್ರಮವಾಗಿ ಕ್ವಿಂಟಲ್‌ಗೆ ₹ 375ರಷ್ಟು ಮತ್ತು ₹ 300ರಷ್ಟು ಏರಿಕೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯು 2021ರ ಅವಧಿಗೆ ಈ ಎಂಎಸ್‌ಪಿಗೆ ಒಪ್ಪಿಗೆ ನೀಡಿತು.

ಸಾಮಾನ್ಯ ಗುಣಮಟ್ಟದ (ಎಫ್ಎಕ್ಯು) ಮಿಲ್ಲಿಂಗ್ ಕೊಪ್ರಾದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹ 9,960ರಿಂದ ₹ 10,335ಕ್ಕೆ ಹೆಚ್ಚಿಸಲಾಗಿದೆ. ಬಾಲ್ ಕೊಪ್ರಾ ಬೆಲೆ ಕ್ವಿಂಟಲ್‌ಗೆ ₹ 10,300ರಿಂದ ₹ 10,600ಕ್ಕೆ ಏರಿಕೆಯಾಗಿದೆ.

ಮಿಲ್ಲಿಂಗ್ ಕೊಪ್ರಾದ ಎಂಎಸ್‌ಪಿಯು ಉತ್ಪಾದನಾ ವೆಚ್ಚಕ್ಕಿಂತಲೂ ಶೇ 52ರಷ್ಟು ಹಾಗೂ ಬಾಲ್ ಕೊಪ್ರಾ ಎಂಎಸ್‌ಪಿ ಶೇ 55ರಷ್ಟು ಹೆಚ್ಚಿಗೆ ಇದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.