ಮಂಗಳವಾರ, ಆಗಸ್ಟ್ 16, 2022
20 °C

ಸಣ್ಣ ಉಳಿತಾಯ: ಬಡ್ಡಿ ಯಥಾಸ್ಥಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣದುಬ್ಬರ ಹೆಚ್ಚಿದ್ದರೂ, ರೆಪೊ ದರ ಏರಿಕೆ ಆಗುತ್ತಿದ್ದರೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಜುಲೈ–ಸೆಪ್ಟೆಂಬರ್ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಿದೆ.

2020–21ರ ಮೊದಲ ತ್ರೈಮಾಸಿಕದಿಂದಲೂ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಪರಿಷ್ಕರಣೆ ಆಗಿಲ್ಲ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್‌) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯೋಜನೆಗಳಲ್ಲಿ ತೊಡಗಿಸುವ ಹಣಕ್ಕೆ ಈಗಿರುವಂತೆಯೇ ಕ್ರಮವಾಗಿ ಶೇಕಡ 7.1 ಮತ್ತು ಶೇ 6.8ರಷ್ಟು ಬಡ್ಡಿ ಸಿಗಲಿದೆ.

ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ, ಒಂದು ವರ್ಷದ ಅವಧಿ ಠೇವಣಿಗೆ ಶೇ 5.5ರಷ್ಟು ಬಡ್ಡಿ ಸಿಗಲಿದೆ.

ಆರ್‌ಬಿಐ ಮೇ ನಂತರದಲ್ಲಿ ರೆಪೊ ದರವನ್ನು ಶೇ 0.90ರಷ್ಟು ಜಾಸ್ತಿ ಮಾಡಿದೆ. ಚಿಲ್ಲರೆ ಹಣದುಬ್ಬರ ದರವು ದೇಶದಲ್ಲಿ ಸತತ ಐದು ತಿಂಗಳುಗಳಿಂದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.