ಮಂಗಳವಾರ, ಮಾರ್ಚ್ 21, 2023
31 °C

ಆದಾಯ ತೆರಿಗೆ ಪೋರ್ಟಲ್‌ ಸಿದ್ಧಪಡಿಸಲು ಇನ್ಫೊಸಿಸ್‌ಗೆ ₹ 164 ಕೋಟಿ ಪಾವತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಹೊಸ ಪೋರ್ಟಲ್‌ ಸಿದ್ಧಪಡಿಸಲು ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ಗೆ 2019ರ ಜನವರಿಯಿಂದ 2021ರ ಜೂನ್‌ವರೆಗಿನ ಅವಧಿಯಲ್ಲಿ ಒಟ್ಟು ₹ 164.5 ಕೋಟಿ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

‘ಹೊಸ ಪೋರ್ಟಲ್‌ ಸಿದ್ಧಪಡಿಸುವ ಗುತ್ತಿಗೆಯನ್ನು ಇನ್ಫೊಸಿಸ್‌ ಕಂಪನಿಗೆ ಮುಕ್ತ ಟೆಂಡರ್ ಮೂಲಕ ನೀಡಲಾಯಿತು’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಹೊಸ ಪೋರ್ಟಲ್‌ಅನ್ನು ಜೂನ್ 7ರಂದು ಲೋಕಾರ್ಪಣೆ ಮಾಡಿದೆ. ಹೊಸ ಪೋರ್ಟಲ್‌ನಲ್ಲಿ ಸಮಸ್ಯೆಗಳು ಇರುವ ಬಗ್ಗೆ ಸಾರ್ವಜನಿಕರು, ತೆರಿಗೆ ವೃತ್ತಿಪರರು ಮತ್ತು ಇತರರು ದೂರಿದ್ದಾರೆ ಎಂದು ಚೌಧರಿ ತಮ್ಮ ಉತ್ತರದಲ್ಲಿ ಹೇಳಿದ್ದಾರೆ.

‘ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಇರುವುದನ್ನು ಇನ್ಫೊಸಿಸ್‌ ಒಪ್ಪಿಕೊಂಡಿದೆ. ಪರಿಹಾರ ಕಾಣದೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಆದಾಯ ತೆರಿಗೆ ಇಲಾಖೆಯು ಇನ್ಫೊಸಿಸ್‌ ಜೊತೆ ಸಂಪರ್ಕದಲ್ಲಿದೆ’ ಎಂದು ಸಚಿವರು ವಿವರಿಸಿದ್ದಾರೆ.

ಪೋರ್ಟಲ್‌ ನಿಧಾನವಾಗಿ ಕೆಲಸ ಮಾಡುತ್ತಿದ್ದುದು, ಕೆಲವು ಕೆಲಸಗಳು ಆಗುತ್ತಿಲ್ಲದಿದ್ದುದು ಹಾಗೂ ಇತರ ಕೆಲವು ತಾಂತ್ರಿಕ ಸಮಸ್ಯೆಗಳು ಈಗ ಬಗೆಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು